ಹೆಬ್ರಿ: ಇಲ್ಲಿನ ಅಭಯಹಸ್ತೆ ಆದಿಶಕ್ತಿ ಕ್ಷೇತ್ರ, ನಂದಿಕೇಶ್ವರ ದೇವಸ್ಥಾನ, ಬ್ರಹ್ಮಬೈದರ್ಕಳ ಗರಡಿ ಮತ್ತು ಧರ್ಮದೈವಗಳ ಸನ್ನಿಧಿಯಲ್ಲಿ ನಡೆಯುತ್ತಿರುವ ಆದಿಮುದ್ರೋತ್ಸವ ವರ್ಧಂತಿ ಉತ್ಸವ, 53ನೇ ವರ್ಷದ ನೇಮೋತ್ಸವದಲ್ಲಿ ಬುಧವಾರ ಭಕ್ತರ ಧನಕನಕ ಅಭಿವೃದ್ಧಿಗಾಗಿ ಲಕ್ಷ್ಮೀನಾರಾಯಣ ಹೃದಯ ಹೋಮ ನಡೆಯಿತು.

ಸಂಜೆ ಮೂಲಮೈಸಂದಾಯ ರಕ್ತೇಶ್ವರಿ, ಜಾಲಬೈಕಡ್ತಿ, ಪಟ್ಟದ ಪಂಜುರ್ಲಿ, ಜುಮಾದಿ ಬಂಟ, ಕಲ್ಕುಡ ಕಲ್ಲುರ್ಟಿ ಕೋಲ, ದೇವಿ ದೈವಗಳ ಮುಖಾವಲಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ನೂರಾರು ಭಕ್ತರು ಭಾಗವಹಿಸಿದ್ದರು.

ಮುದ್ರಾಡಿ ನಾಟ್ಕದೂರು ಕ್ಷೇತ್ರದಲ್ಲಿ ಭಕ್ತರು ಹೆಜ್ಜೆ ನಮಸ್ಕಾರ, ತುಪ್ಪದ ದೀಪ ಹಚ್ಚಿ ಅಭಯಗಂಟೆ ಭಾರಿಸಿ ಸೇವೆ ಸಲ್ಲಿಸಿದರು. ಕ್ಷೇತ್ರದ ನಂದಿಕೇಶ್ವರನಿಗೆ ಭಕ್ತಿಯಿಂದ ಹೆಜ್ಜೆ ನಮಸ್ಕಾರ ಹಾಕಿದರೆ, ಆದಿಶಕ್ತಿಯನ್ನು ಭಕ್ತಿಯಿಂದ ಪ್ರಾರ್ಥಿಸಿ ಕ್ಷೇತ್ರದಲ್ಲಿ ತುಪ್ಪದ ದೀಪ ಹಚ್ಚಿ ಅಭಯಗಂಟೆ ಬಾರಿಸಿದರೆ ಸಕಲ ಇಷ್ಟಾರ್ಥಗಳು 48 ದಿನಗಳಲ್ಲಿ ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ.

ಪರಿಹಾರವಾಗದ ಸಮಸ್ಯೆ, ಆರೋಗ್ಯ ಸಮಸ್ಯೆ, ಮದುವೆ ವಿಳಂಬ, ದೋಷ, ಕಷ್ಟ, ನೋವು, ಉದ್ಯೋಗ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ತಾಯಿ ನಿವಾರಣೆ ಮಾಡಿ ಹರಸುತ್ತಾಳೆ ಎಂದು ಧರ್ಮಯೋಗಿ ಸುಕುಮಾರ್ ಮೋಹನ್ ಹೇಳಿದರು.

ಮಂಗಳವಾರ ಬ್ರಹ್ಮಬೈದರ್ಕಳ ನೇಮೋತ್ಸವ, ಕಾರ್ಯಸಿದ್ಧಿ ಅಥರ್ವ ಶೀರ್ಷ ಗಣಪತಿ ಯಾಗ ನಡೆಯಿತು. ಸಂಜೆ ತರ್ಸಲೆ ಹೊರಟು ಬ್ರಹ್ಮಬೈದರ್ಕಳ ನೇಮೋತ್ಸವ, ದೀಪೋತ್ಸವ, ಮಾಯಂದಾಲಮ್ಮ ನೇಮ, ಕೋಟಿ ಚನ್ನಯ, ಶ್ರೀದೇವಿ ದರ್ಶನ ಮುಖಾವಲಿ ಸುತ್ತುಬಲಿ ಬಳಿಕ ಜೋಗಿಪುರುಷ ನೇಮ ನಡೆಯಿತು.

ಗುರುವಾರ (ಏ. 9) ಗುಳಿಗ ಚಾಮುಂಡಿ, ಸಂಜೆ 7ರಿಂದ ಬೊಬ್ಬರ್ಯ, ಮಲೆಸಾವಿರ, ಕೊರಗಜ್ಜ ಕೋಲ ನಡೆಯಲಿದೆ. ಧರ್ಮಾಧಿಕಾರಿ ವಿಜಯಕೀರ್ತಿ ಧರ್ಮಯೋಗಿ ಸುಕುಮಾರ್ ಮೋಹನ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-28-113088665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.