ಹೆಬ್ರಿ: ಮುದ್ರಾಡಿಯ ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ಅಧೀನದ ಎಂಎನ್ಡಿಎಸ್ಎಂ ಅನುದಾನಿತ ಪ್ರೌಢಶಾಲೆಯಲ್ಲಿ ಸೋಮವಾರ ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ದಾನಿಗಳು, ಹಿರಿಯ ವಿದ್ಯಾರ್ಥಿಗಳ ವತಿಯಿಂದ ನಗದು ಪುರಸ್ಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಮುದ್ರಾಡಿಯ ವೈದ್ಯ ಡಾ.ಎಂ.ಎಸ್. ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಪ್ರಾರಂಭೋತ್ಸವದಲ್ಲಿ ಸರ್ಕಾರ ನೀಡಿದ ಉಚಿತ ಪಠ್ಯಪುಸ್ತಕ, ದಾನಿ ಕೋಟ ಆನಂದ ಸಿ. ಕುಂದರ್ ನೀಡಿದ ನೋಟ್ ಪುಸ್ತಕ, ಬೆಂಗಳೂರಿನ ಶಿಕ್ಷಣ ಪ್ರೇಮಿ ರಾಜಶೇಖರ್ ನೀಡಿದ ಗಣಿತ ಸೂತ್ರ ಪುಸ್ತಕ, ಶಾಲೆಯ ಹಳೆ ವಿದ್ಯಾರ್ಥಿ ಮುದ್ರಾಡಿ ಭಕ್ರೆ ವಸಂತ ಪೂಜಾರಿ ನೀಡಿದ ಕ್ರೀಡಾ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶಾಲೆಗೆ ದಾಖಲಾದ ವಿದ್ಯಾರ್ಥಿಗಳ ಮೆರವಣಿಗೆ ನಡೆಸಿ ಗುಲಾಬಿ ಹೂವು ಮತ್ತು ಪೆನ್ನು ನೀಡಿ ಸ್ವಾಗತಿಸಲಾಯಿತು.

ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಬ್ರಿ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಕಾರ್ಕಳ ಶಿಕ್ಷಣ ವಲಯದಲ್ಲಿ ಕನ್ನಡ ಮಾಧ್ಯಮದಲ್ಲಿ ತೃತೀಯ ಸ್ಥಾನ ಪಡೆದ ಸಂಸ್ಥೆಯ ವಿದ್ಯಾರ್ಥಿನಿ ಬಲ್ಲಾಡಿ ಪ್ರತೀಕ್ಷಾ ಕುಲಾಲ್, ಶಾಲೆಗೆ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವರಂಗದ ಸ್ನೇಹ ಮೂಲ್ಯ ಮತ್ತು ಬಲ್ಲಾಡಿ ಕರಾದಿಬೈಲು ಲಾವಣ್ಯ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತೆ ಸಂಧ್ಯಾ ಎಸ್.ಪೈ ಕೊಡಮಾಡಿದ ದತ್ತಿನಿಧಿ ಬಹುಮಾನ, ಎಂ.ಶೇಷಗಿರಿರಾವ್ ದತ್ತಿನಿಧಿ ಬಹುಮಾನ, ಜಗದಂಬಾ ಆರ್.ಶೆಟ್ಟಿ ಎಂ. ಮರಿಯಪ್ಪ ಕಲ್ಕೂರ ಹಾಗೂ ಕೃಷ್ಣಯ್ಯ ಶೆಟ್ಟಿ ಸ್ಮರಣಾರ್ಥ ಕೊಡಮಾಡಿದ ದತ್ತಿನಿಧಿ ಬಹುಮಾನ, ವರಂಗ ಅರ್ಬಿ ಕಮಲ ಪೂಜಾರಿ ಸ್ಮರಣಾರ್ಥ ವಿಠಲ ಪೂಜಾರಿ ಮತ್ತು ಮಕ್ಕಳು ಅರ್ಬಿ ದತ್ತಿ ನಿಧಿಯಿಂದ ಸಮಾಜ ವಿಜ್ಞಾನ ವಿಷಯಕ್ಕಾಗಿ ಕೊಡಮಾಡಿದ ಬಹುಮಾನ, ಕನ್ನಡ ಸಾಹಿತ್ಯ ಪೋಷಕ ಹೆಬ್ರಿ ಗಂಗಾಧರ್ ರಾವ್ ನೀಡಿದ ಕಲಿಕಾ ಬಹುಮಾನ, ಸಂಸ್ಥೆಯ ಹಳೆ ವಿದ್ಯಾರ್ಥಿ ಮುದ್ರಾಡಿ ಭಕ್ರೇ ಮಂಜುನಾಥ್ ಅವರ ನಗದು ಬಹುಮಾನ, ಶೇ 100 ಫಲಿತಾಂಶ ದಾಖಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಹಳೆ ವಿದ್ಯಾರ್ಥಿ ಭಕ್ರೆ ವಸಂತ ಪೂಜಾರಿ ಮತ್ತು ಶಿಕ್ಷಕ ವೃಂದ ನೀಡಿದ ಧನಸಹಾಯವನ್ನು ವಿತರಿಸಲಾಯಿತು.

ಎಂ.ಎ. ಇತಿಹಾಸದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಉಪ್ಪಳದ ರಮ್ಯಾ ಅವರನ್ನು ಗೌರವಿಸಲಾಯಿತು. ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪ್ರತಿಮಾ ದೇವಾಡಿಗ ಉಪ್ಪಳ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಂತ್ರಪಲ್ಕೆ ಅಶೋಕ ಪೂಜಾರಿ, ಸಾಮಾಜಿಕ ಮುಂದಾಳು ವರಂಗ ಅರ್ಬಿ ವಿಠಲ ಪೂಜಾರಿ, ಶಾಲಾ ಹಿತೈಷಿ ಹೆಬ್ರಿ ಶಂಕರ್ ರಾವ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಶಿಕ್ಷಕ ಮಹೇಶ ನಾಯ್ಕ ಕೆ. ನಿರೂಪಿಸಿ, ಪಿ.ವಿ. ಆನಂದ ಸಾಲಿಗ್ರಾಮ ವಂದಿಸಿದರು. ಶಿಕ್ಷಕರಾದ ರಘುಪತಿ ಹೆಬ್ಬಾರ್, ಶ್ಯಾಮಲಾ ಕೊಠಾರಿ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಎಂ. ಸಹಕರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-28-662002114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.