ಕಾರ್ಕಳ: ತಾಲ್ಲೂಕಿನ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮುದಾಯ ಭವನದಲ್ಲಿ ಈಚೆಗೆ ಮುಂಡ್ಕೂರು ಸಮೃದ್ಧಿ ಸಂಜೀವಿನಿ ಒಕ್ಕೂಟ, ನಮ್ಮ ಫ್ರೆಂಡ್ಸ್ ಮುಂಡ್ಕೂರು, ದುರ್ಗಾಪರಮೇಶ್ವರಿ ದೇವಸ್ಥಾನ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಚ್ಚೇರಿಪೇಟೆ ಗ್ರಾಮ ಪಂಚಾಯಿತಿ, ಲಯನ್ಸ್ ಕ್ಲಬ್ ಮುಂಡ್ಕೂರು ಕಡಂದಲೆ ಇವುಗಳ ಸಹಯೋಗದಲ್ಲಿ ನೇತ್ರಜ್ಯೋತಿ ಚಾರಿಟ ಬಲ್ ಟ್ರಸ್ಟ್, ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣೆ, ಪೊರೆ ಶಸ್ತ್ರಚಿಕಿತ್ಸೆ, ಮಧುಮೇಹ ರಕ್ತದೊತ್ತಡ ಪರೀಕ್ಷಾ ಶಿಬಿರ ನಡೆಯಿತು.

ಉದ್ಘಾಟಿಸಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೋರಿಬೆಟ್ಟುಗುತ್ತು ಮಾತನಾಡಿ ಒತ್ತಡ ಜೀವನದ ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತದೆ. 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹಾರೋಗ್ಯ ರಕ್ಷಣೆ ಜೊತೆ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದರು.

ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್ಒ ಮರ್ಲಿನ್ ಕ್ಷಯರೋಗದ ಮಾಹಿತಿ ನೀಡಿದರು. ಪ್ರಸಾದ್ ನೇತ್ರಾಲಯದ ನೇತೃ ತಜ್ಞ ಡಾ.ನಿರಂಜನ್, ನಮ್ಮ ಫ್ರೆಂಡ್ಸ್ ನ ಸಂಚಾಲಕ ಅರುಣ್ ರಾವ್, ಲಯನ್ಸ್ ಕ್ಲಬ್ ಅಧ್ಯಕ್ಷ ಯಶವಂತ ಆಚಾರ್ಯ, ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷೆ ಆಶಾ, ಕಾರ್ಯದರ್ಶಿ ಸುಜಾತಾ ಪಾಲ್ಗೊಂಡಿದ್ದರು.

ಸಮೃದ್ಧಿ ಸಂಜೀವಿನಿ ಒಕ್ಕೂಟದ ಶಶಿಕಲಾ ಪ್ರಾರ್ಥಿಸಿದರು. ಒಕ್ಕೂಟದ ಎಂಬಿಕೆ ವನಿತಾ ಶೆಟ್ಟಿ ವಂದಿಸಿದರು.

ಉದಯ ಮುಂಡ್ಕೂರು ಸ್ವಾಗತಿಸಿದರು. ಅರುಣ್ ರಾವ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-28-2105217834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.