ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟ್ಟುಗುಳ್ಳ ಗದ್ದೆಗಳಲ್ಲಿ ಭತ್ತದ ನಾಟಿ!

ವರ್ಷಕ್ಕೆ 2 ವಿಭಿನ್ನ ಬೆಳೆ ತೆಗೆಯುವ ಮಟ್ಟುಗ್ರಾಮದ ಕೃಷಿಕರು
Last Updated 29 ಜೂನ್ 2022, 4:40 IST
ಅಕ್ಷರ ಗಾತ್ರ

ಶಿರ್ವ: ಆ ಗದ್ದೆಗಳಲ್ಲಿ ಬಹಳ ಹಿಂದಿನಿಂದಲೂ ಮಟ್ಟುಗುಳ್ಳ ಬೆಳೆಯುತ್ತಿದ್ದರು. ಇತಿಹಾಸ ಪ್ರಸಿದ್ಧ ಮುಟ್ಟುಗುಳ್ಳ ಬೆಳೆಯುವ ನೂರಾರು ಎಕರೆ ಗದ್ದೆಗಳಲ್ಲಿ ಇದೀಗ ಭತ್ತದ ನಾಟಿ ಕಾರ್ಯ ಭರದಿಂದ ಸಾಗುತ್ತಿದೆ.

ಬೇಸಿಗೆಯಲ್ಲಿ ಗದ್ದೆಗಳಲ್ಲಿ ಮಟ್ಟುಗುಳ್ಳ ಬೆಳೆಯುವ ಮಟ್ಟು ಮತ್ತು ಕೈಪುಂಜಾಲ್ ಪ್ರದೇಶದ ಕೃಷಿಕರು ಮಳೆಗಾಲದಲ್ಲಿ ಅದೇ ಗದ್ದೆಗಳಲ್ಲಿನ ಕಳೆ ಗಿಡಗಳನ್ನು ತೆಗೆದು ಭತ್ತದ ಕೃಷಿ ಮಾಡುವುದು ಸರ್ವೇ ಸಾಮಾನ್ಯ.

ಈ ಬಾರಿ ಕೂಡಾ ಈ ಗ್ರಾಮದ ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆತಿದೆ. ಬಿತ್ತನೆ ಮಾಡಿದ ಗುಳ್ಳದ ಗದ್ದೆಗಳಲ್ಲಿ ನೇಜಿ ತೆಗೆದು ನಾಟಿ ಮಾಡಲು ಚಾಲನೆ ನೀಡಲಾಗಿದೆ. ಈ ಭಾಗದ ಕೃಷಿಕರು ಪ್ರತಿ ವರ್ಷ ಒಂದೇ ಗದ್ದೆಯಲ್ಲಿ ಎರಡು ಬೆಳೆಗಳನ್ನು ತೆಗೆಯುವ ಮೂಲಕ ತರಕಾರಿ ಮತ್ತು ಭತ್ತ ಬೆಳೆದು ಮಾದರಿಯಾಗಿದ್ದಾರೆ. ಎರಡೂ ಬೆಳೆಗಳಿಗೆ ಪೂರಕವಾಗುವಂತೆ ಮಣ್ಣಿನ ಫಲವತ್ತತೆ ಕಾಯ್ದುಕೊಂಡು ಕೃಷಿಕಾಯಕ ಯಶಸ್ವಿಯಾಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT