ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತೇಶ್ವರಿ ದೇಗುಲ: ಶರನ್ನವರಾತ್ರಿ ಸಂಭ್ರಮ

Last Updated 28 ಸೆಪ್ಟೆಂಬರ್ 2022, 5:24 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ಕೋಟದ ಅಮೃತೇಶ್ವರಿ ದೇವಳದಲ್ಲಿ ಶರನ್ನವರಾತ್ರಿ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ದೇವಳದಲ್ಲಿ ನಡೆದ ದುರ್ಗಾಹೋಮ, ಸಪ್ತಸತಿ ಪಾರಾಯಣ ಮತ್ತು ಪೂಜಾ ಕಾರ್ಯದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಟುಂಬಿಕರು ಪಾಲ್ಗೊಂಡರು.

ಮಧುಸೂದನ ಬಾಯರಿ ನೇತೃತ್ವದಲ್ಲಿ ನಡೆದ ವಿವಿಧ ಪೂಜಾ ಕಾರ್ಯಕ್ರಮ ನಡೆಯಿತು. ದೇವಳದ ಅಧ್ಯಕ್ಷ ಆನಂದ್ ಸಿ. ಕುಂದರ್ ಅವರು ಸಚಿವರನ್ನು ಗೌರವಿಸಿದರು.

ದೇವಳದ ಆಡಳಿತ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದೇವ ಐತಾಳ್, ಎಂ.ಸುಬ್ರಾಯ ಆಚಾರ್ಯ, ಜಿ.ಸತೀಶ್ ಹೆಗ್ಡೆ, ಚಂದ್ರ ಪೂಜಾರಿ, ಸುಂದರ್ ಕಾರ್ಕಡ, ಮಾಜಿ ಸದಸ್ಯ ಚಂದ್ರ ಆಚಾರ್ಯ, ಜಾನಕಿ ಹಂದೆ, ವಿಶ್ವನಾಥ ಶೆಟ್ಟಿ, ಸುಬ್ರಾಯ ಜೋಗಿ, ಅರ್ಚಕ ಪ್ರತಿನಿಧಿಗಳಾದ ಭಾಸ್ಕರ್ ಜೋಗಿ, ದೇವಳದ ಮ್ಯಾನೇಜರ್ ಗಣೇಶ್ ಹೊಳ್ಳ, ಕೋಟ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT