ಹೆಬ್ರಿ: ವೈಜ್ಞಾನಿಕವಾಗಿ ನೇತ್ರಾವತಿ ನದಿ ತಿರುವಿನಿಂದ ನೀರು ಸಿಗುವುದಿಲ್ಲ ಎಂದು ತಿಳಿದಿದ್ದರೂ ಯೋಜನೆಯ ಮೊತ್ತವನ್ನು ₹8 ಸಾವಿರ ಕೋಟಿಯಿಂದ ₹24 ಸಾವಿರ ಕೋಟಿಗೆ ಏರಿಸಿ ನಮ್ಮನ್ನಾಳುವ ಸರ್ಕಾರಗಳು ಷಡ್ಯಂತರ ಮಾಡಿವೆ. ಇದು ನದಿ ತಿರುವು ಯೋಜನೆಯಲ್ಲ, ನಿಧಿ ತಿರುವು ಯೋಜನೆಯಾಗಿದೆ. ಇಂದಿನ ರಾಜಕೀಯ ನದಿ, ಸೀಟು, ಓಟಿಗೆ ಸೀಮಿತವಾಗಿರುವುದು ದುರಂತ ಎಂದು ಪರಿಸರವಾದಿ ದಿನೇಶ ಹೊಳ್ಳ ಹೇಳಿದರು.

ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ರಾಘವೇಂದ್ರ ಚಾರಿಟಬಲ್ ಟ್ರಸ್ಟ್, ಸುಹಾಸಂ, ನಮ್ಮ ಮನೆ ನಮ್ಮ ಮರ ವತಿಯಿಂದ ಶನಿವಾರ ಇಲ್ಲಿನ ಗಿಲ್ಲಾಳಿಯ ವಿಶ್ವೇಶ ಕೃಷ್ಣ ಗೋಶಾಲೆಯಲ್ಲಿ ‘ಮತ್ತೊಮ್ಮೆ ಕೂತು ಮಾತಾಡೋಣ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ಕಾಡಿನ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪ, ಸರ್ಕಾರದ ಅವೈಜ್ಞಾನಿಕ ಯೋಜನೆಯಿಂದ ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಉಂಟಾಗಿದೆ. ಇದನ್ನು ಸಂರಕ್ಷಿಸಲು ಒಂದು ಪ್ರಮುಖ ಯೋಜನೆ ಜಾರಿಯಾಗಬೇಕಾಗಿದೆ. ಅಳಿವಿನಂಚಿನಲ್ಲಿರುವ ಹಾರ್ನ್ ಬಿಲ್ ಪಕ್ಷಿಯ ಸಂರಕ್ಷಣೆ ಜವಾಬ್ದಾರಿ ನಮ್ಮ ಮೇಲಿದೆ. ಅರಣ್ಯ ಇಲಾಖೆ ಅರಿವು ಮೂಡಿಸಬೇಕು ಎಂದು ದಿನೇಶ ಹೊಳ್ಳ ಹೇಳಿದರು.

ಶ್ರೀರಾಘವೇಂದ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗಾಗಿ ಉಡುಪಿ ಸಂಸ್ಕೃತಿ ಪ್ರತಿಷ್ಠಾನಕ್ಕೆ ಆರ್ಥಿಕ ನೆರವು ನೀಡಲಾಯಿತು.

ಹೆಬ್ರಿ ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಭಾರ್ಗವಿ ಆರ್.ಐತಾಳ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲ್ಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಸುಹಾಸಂ ಉಡುಪಿ ಅಧ್ಯಕ್ಷೆ ಸಂಧ್ಯಾ ಶೆಣೈ, ನಮ್ಮ ಮನೆ ನಮ್ಮ ಮರ ಸಂಸ್ಥೆಯ ಅವಿನಾಶ್ ಕಾಮತ್, ಉಡುಪಿ ಸಂಸ್ಕೃತಿ ಪ್ರತಿಷ್ಠಾನ ಸಂಸ್ಥಾಪಕ ವಿಶ್ವನಾಥ ಶೆಣೈ, ಉರಗ ತಜ್ಞ ಗುರುರಾಜ್ ಸನಿಲ್, ಉಡುಪಿ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸಾಹಿತಿ ಕತ್ಯಾಯಿನಿ ಕುಂಜಿಬೆಟ್ಟು, ಉಡುಪಿ ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ್, ಹೆಬ್ರಿ ಗೋಶಾಲೆಯ ಟ್ರಸ್ಟಿ ಗಿಲ್ಲಾಳಿ ಪದ್ಮನಾಭ ಆಚಾರ್ಯ, ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ, ಉದ್ಯಮಿ ಯೋಗೀಶ್ ಭಟ್, ರಾಮಕೃಷ್ಣ ಆಚಾರ್ಯ ಹಾಜರಿದ್ದರು. ಅವಿನಾಶ್ ಕಾಮತ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-29-2052464620

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.