ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಡಯಾಲಿಸಿಸ್ ಕೇಂದ್ರ ಉದ್ಘಾಟನೆ

ಬಾಳಿಗಾ ಆಸ್ಪತ್ರೆಗೆ ಬ್ರಹ್ಮಾವರ ರೋಟರಿ ಕ್ಲಬ್ ಕೊಡುಗೆ
Last Updated 2 ಜುಲೈ 2022, 4:22 IST
ಅಕ್ಷರ ಗಾತ್ರ

ಬ್ರಹ್ಮಾವರ: ಬ್ರಹ್ಮಾವರ ರೋಟರಿ ಕ್ಲಬ್‌ನ ಸುವರ್ಣ ಮಹೋತ್ಸವ ಅಂಗವಾಗಿ ರೋಟರಿ ಸೋಷಿಯಲ್ ವೆಲ್‌ಫೇರ್‌ ಟ್ರಸ್ಟ್, ಬ್ರಹ್ಮಾವರ ರೋಟರಿ ಕ್ಲಬ್‌ ಹಾಗೂ ಕಮಲಾ ಎ. ಬಾಳಿಗಾ ವೈದ್ಯಕೀಯ ಕೇಂದ್ರದ ಸಹಯೋಗದಲ್ಲಿ ₹40 ಲಕ್ಷ ವೆಚ್ಚದಲ್ಲಿ 3 ಡಯಾಲಿಸಿಸ್‌ ಯಂತ್ರ, ಐಸಿಯು ಕೋಣೆ ಹಾಗೂ ಇನ್ನಿತರ ಸಲಕರಣೆಗಳ ಕೇಂದ್ರದ ಉದ್ಘಾಟನಾ ಸಮಾರಂಭ ಹಾರಾಡಿಯ ಕಮಲಾ ಎ. ಬಾಳಿಗಾ ಮೆಡಿಕಲ್‌ ಸೆಂಟರ್‌ನಲ್ಲಿ ನಡೆಯಿತು.

ಜಿಲ್ಲಾ ಗವರ್ನರ್ ಎಂ.ಜಿ. ರಾಮಚಂದ್ರಮೂರ್ತಿ ಉದ್ಘಾಟಿಸಿ ‘ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ರೋಟರಿ ಸಂಸ್ಥೆ ಅನೇಕ ಬಡ ಜನರಿಗೆ ಸಹಾಯಹಸ್ತವನ್ನು ನೀಡುತ್ತಿದೆ. ಇದರ ಉಪಯೋಗವನ್ನು ಪಡೆಯಬೇಕು’ ಎಂದರು.

ಬಾಳಿಗಾ ಸಂಸ್ಥೆಯ ಟ್ರಸ್ಟಿ ಡಾ.ಆರ್.ವಿ. ಬಾಳಿಗಾ, ಡಾ.ಸಂದೀಪ್ ಬಾಳಿಗಾ, ನಿರ್ದೇಶಕ ಡಾ.ಪಿ.ವಿ. ಭಂಡಾರಿ, ಶಾಸಕ ಕೆ. ರಘುಪತಿ ಭಟ್, ನಿಯೋಜಿತ ಗವರ್ನರ್ ಡಾ.ಜಯಗೌರಿ, ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್, ಆರೂರು ನಾರಾಯಣ ಶೆಟ್ಟಿ ಬೆಂಗಳೂರು, ವಲಯ ಸೇನಾನಿ ವಿಜಯ್‌ ಕುಮಾರ್ ಶೆಟ್ಟಿ, ಹಾರಾಡಿ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ರೋಟರಿ ಅಧ್ಯಕ್ಷ ಹರೀಶ್‌ ಕುಂದರ್, ನಿಯೋಜಿತ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಸತೀಶ್‌ ಶೆಟ್ಟಿ, ನಿಯೋಜಿತ ಕಾರ್ಯದರ್ಶಿ ಆಲ್ವಿನ್ ಅಂದ್ರಾದೆ, ಪ್ರಮುಖರಾದ ಅರುಣ್ ಕುಮಾರ್‌ ಶೆಟ್ಟಿ, ವಾಲ್ಟರ್ ಸಿರಿಲ್ ಪಿಂಟೊ, ಬಿ.ಎಂ.ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT