ಬುಧವಾರ, ಆಗಸ್ಟ್ 21, 2019
27 °C

ಮಠಕ್ಕೆ ಹಣ ಬೇಡ: ಯೋಜನೆಗಳಿಗೆ ಕೊಡಲಿ: ಪಂಡಿತಾರಾಧ್ಯ ಸ್ವಾಮೀಜಿ

Published:
Updated:

ಉಡುಪಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಠಕ್ಕೆ ಹಣ ಕೊಟ್ಟರೆ ಸ್ವೀಕರಿಸುವುದಿಲ್ಲ ಎಂದು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಠದ ಯೋಜನೆಗಳಿಗೆ ಅನುದಾನ ನೀಡಿದರೆ ಮಾತ್ರ ಸ್ವೀಕರಿಸುತ್ತೇವೆ. ಅದಕ್ಕೆ ಲೆಕ್ಕಪತ್ರವನ್ನೂ ಸರ್ಕಾರಕ್ಕೆ ಸಲ್ಲಿಸುತ್ತೇವೆ. ನೇರವಾಗಿ ಹಣ ಕೊಟ್ಟರೆ ಸ್ವೀಕಾರ ಮಾಡುವುದಿಲ್ಲ ಎಂದು ಸಾಣೆಹಳ್ಳಿ ಶ್ರೀಗಳು ತಿಳಿಸಿದರು. 

Post Comments (+)