ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಬೇಸಿಗೆ ಶಿಬಿರಗಳ ಮೇಲೆ ಕೋವಿಡ್‌ ಕರಿನೆರಳು

Last Updated 11 ಮಾರ್ಚ್ 2020, 19:36 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್–19 ಕರಿನೆರಳು ಬೇಸಗೆ ಶಿಬಿರಗಳ ಮೇಲೂ ಬಿದ್ದಿದೆ. ಈ ಬಾರಿ ಬೇಸಗೆ ರಜೆಯ ಅವಧಿಯಲ್ಲಿ ನಿರೀಕ್ಷಿತ ಶಿಬಿರಗಳು ನಡೆಯುವುದು ಅನುಮಾನವಾಗಿದೆ.

ಕಲೆ, ಸಾಹಿತ್ಯ, ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವರಂಗಭೂಮಿಉಡುಪಿ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಪ್ರತಿ ವರ್ಷ ಬೇಸಗೆ ರಜೆಯಲ್ಲಿ ವಿದ್ಯಾರ್ಥಿಗಳಿಗೆ ರಂಗ ಶಿಬಿರಗಳನ್ನು ಆಯೋಜಿಸುತ್ತಿತ್ತು.

ಈ ಬಾರಿ ಕೋವಿಡ್‌ ಭೀತಿಯಿಂದ ಶಿಬಿರ ನಡೆಯುವುದು ಅನುಮಾನ. ಈ ಬಗ್ಗೆ ಸಂಸ್ಥೆಯ ಪದಾಧಿಕಾರಿಗಳ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಂಗಕರ್ಮಿ ಎಚ್.ಪಿ.ರವಿರಾಜ್‌ ತಿಳಿಸಿದರು.

ಬೇಸಗೆ ಶಿಬಿರಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆಗಳಾಗುತ್ತಿದ್ದವು. ಪಠ್ಯೇತ್ತರ ಚಟುವಟಿಕೆಗಳಲ್ಲಿ ಭಾಗವಹಿಸಿ ಮಕ್ಕಳು ಸಂಭ್ರಮಿಸುತ್ತಿದ್ದರು. ಈ ಬಾರಿ ಕೋವಿಡ್‌ ಭೀತಿಯಿಂದ, ಪೋಷಕರು ಮಕ್ಕಳನ್ನು ಶಿಬಿರಗಳಿಗೆ ಕಳುಹಿಸಲು ಆತಂಕ ಪಡುತ್ತಿದ್ದಾರೆ. ಹಾಗಾಗಿ, ಹೆಚ್ಚಿನ ಶಿಬಿರಗಳು ನಡೆಯುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT