ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ಶೌಚಾಲಯ ನಿರ್ವಹಣೆ ಸಂಸ್ಥೆಗಳಿಗೆ ನೋಟಿಸ್‌

ಶೌಚಾಲಯಗಳ ಸ್ವಚ್ಛತೆಗೆ ನೋಡೆಲ್ ಅಧಿಕಾರಿ, ಸೂಪರ್‌ವೈಸರ್‌ಗಳ ನೇಮಕಮಾಡಿದ ನಗರಸಭೆ
Last Updated 31 ಮಾರ್ಚ್ 2023, 16:19 IST
ಅಕ್ಷರ ಗಾತ್ರ

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲ ಶೌಚಾಲಯಗಳ ಸ್ವಚ್ಛತೆಗೆ ತುರ್ತು ಕ್ರಮ ವಹಿಸುವಂತೆ ಶೌಚಾಲಯಗಳ ನಿರ್ವಹಣೆ ಹೊಣೆ ಹೊತ್ತಿರುವ ಗುತ್ತಿಗೆದಾರರಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಪೌರಾಯುಕ್ತರಾದ ರಮೇಶ್ ನಾಯಕ್‌ ನೋಟಿಸ್ ನೀಡಿದ್ದಾರೆ.

ಮಾರ್ಚ್‌ 6ರಂದು ಪ್ರಜಾವಾಣಿಯಲ್ಲಿ ‘ಸಾರ್ವಜನಿಕರ ಪಾಲಿಗೆ ಬಯಲೇ ಶೌಚಾಲಯ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿರುವ ಪೌರಾಯುಕ್ತರು, ಆಸ್ತಾ ಫೌಂಡೇಷನ್‌ ಹಾಗೂ ಎನ್‌.ಕೆ ಶೀಟ್ ಮೆಟಲ್ ವರ್ಕ್ಸ್‌ ಸಂಸ್ಥೆಗೆ ನೋಟಿಸ್ ನೀಡಿ, ಪ್ರತಿದಿನ ಶೌಚಾಲಯಗಳ ನಿರ್ವಹಣೆಯ ಬಗ್ಗೆ ನಗರಸಭೆಗೆ ವರದಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ನಿರ್ವಹಣೆ ಗುತ್ತಿಗೆಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 22 ಸಾರ್ವಜನಿಕ ಶೌಚಾಲಯಗಳಿದ್ದು, 5 ಶೌಚಾಲಯಗಳನ್ನು ಸುಲಭ್ ಇಂಟರ್‌ನ್ಯಾಷನಲ್‌ ಸೋಷಿಯಲ್ ಸರ್ವೀಸ್‌ ಕರ್ನಾಟಕ, 6 ಶೌಚಾಲಯಗಳನ್ನು ಬೆಂಗಳೂರಿನ ಆಸ್ತಾ ಫೌಂಡೇಷನ್‌, 3 ಇ ಶೌಚಾಲಯಗಳನ್ನು ಬೆಂಗಳೂರಿನ ಎನ್‌.ಕೆ. ಶೀಟ್ ಮೆಟಲ್ ವರ್ಕ್ಸ್‌ ಹಾಗೂ ಉಳಿದ ಶೌಚಾಲಯಗಳನ್ನು ಸಂಘ ಸಂಸ್ಥೆಗಳು, ಗುತ್ತಿಗೆದಾರರು ನಿರ್ವಹಣೆ ಮಾಡುತ್ತಿದ್ದಾರೆ.

ಎಲ್ಲ ಶೌಚಾಲಯಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ ನಿರ್ವಹಣೆ ಮಾಡುವಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ. ಜತೆಗೆ, ಪ್ರತಿದಿನ ಶೌಚಾಲಯಗಳ ನಿರ್ವಹಣೆಗೆ ವಾರ್ಡ್‌ವಾರು ನೋಡೆಲ್ ಅಧಿಕಾರಿಗಳು ಹಾಗೂ ಸ್ಯಾನಿಟರಿ ಸೂಪರ್ ವೈಸರ್‌ಗಳಿಗೆ ಉಸ್ತುವಾರಿ ವಹಿಸಲಾಗಿದೆ ಎಂದು ಪೌರಾಯುಕ್ತ ರಮೇಶ್ ನಾಯಕ್ ತಿಳಿಸಿದ್ದಾರೆ.

ಶೌಚಾಲಯಗಳಲ್ಲಿ ಅನೈರ್ಮಲ್ಯ ಹಾಗೂ ಸಮಸ್ಯೆಗಳು ಕಂಡುಬಂದರೆ ಸಾರ್ವಜನಿಕರು ನೇರವಾಗಿ ನಗರಸಭೆ ಸಹಾಯವಾಣಿ 0820– 2520306 ಸಂಪರ್ಕಿಸಬಹುದು. ಅಥವಾ ಜನಸ್ಪಂದನ ಟೋಲ್ ಫ್ರೀ ನಂಬರ್ 1902 ಅಥವಾ ಪೌರಾಯುಕ್ತರಿಗೆ 9448120430 ಖುದ್ದು ವಾಟ್ಸ್‌ ಆ್ಯಪ್ ಮೂಲಕ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT