ಗುರುವಾರ , ಡಿಸೆಂಬರ್ 5, 2019
19 °C

₹ 7.93 ಲಕ್ಷ ಆನ್‌ಲೈನ್‌ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಆನ್‌ಲೈನ್‌ ಶಾಪಿಂಗ್‌ ಮಾಡಿದ್ದಕ್ಕೆ ಪ್ರತಿಯಾಗಿ ಸ್ಕೂಟರ್, ಕಾರು ವಿಜೇತರಾಗಿದ್ದೀರಿ ಎಂದು ನಂಬಿಸಿ, ವ್ಯಕ್ತಿಯೊಬ್ಬರಿಂದ ₹ 7,93 ಲಕ್ಷ ಪಡೆದು ವಂಚನೆ ಎಸಗಲಾಗಿದೆ.

ಬ್ರಹ್ಮಾವರದ ಚಾಂತಾರಿನ ನಿಶ್ಮಿತ್ ಶೆಟ್ಟಿ ವಂಚನೆಗೊಳದಾದವರು. ಈಚೆಗೆ ಇವರ ಮೊಬೈಲ್‌ಗೆ ಕರೆ ಮಾಡಿದ ವಂಚಕ, ಆನ್ ಲೈನ್ ಶಾಪಿಂಗ್‌ನಲ್ಲಿ 3ನೇ ಸ್ಥಾನ ಪಡೆದಿದ್ದು, ಟಿವಿಎಸ್‌ ಜುಪಿಟರ್ ಸ್ಕೂಟರ್ ಗೆದ್ದಿದ್ದೀರಿ, ವಾಹನದ ನೋಂದಣಿ ಶುಲ್ಕ ₹ 2,499 ಪಾವತಿಸುವಂತೆ ಆಮಿಷವೊಡ್ಡಿದ್ದಾನೆ.

ಅದರಂತೆ ನಿಶ್ಮಿತ್ ಶೆಟ್ಟಿ ವಂಚಕನ ಪೇಟಿಎಂ ಖಾತೆಗೆ ಹಣ ಹಾಕಿದ್ದಾರೆ. ನಂತರ ಕೆಲವು ದಿನಗಳ ಬಳಿಕ ಮತ್ತೆ ಕರೆ ಮಾಡಿದ ವಂಚಕರು ‘ನೀವು ಈ ಬಾರಿ ಎರಡನೇ ಸ್ಥಾನಕ್ಕೇರಿದ್ದು, ಹುಂಡೈ ಕಾರು ವಿಜೇತರಾಗಿದ್ದೀರಿ, ಮುಂದೆ, ಒಂದನೇ ಸ್ಥಾನಕ್ಕೇರಲಲಿದ್ದು, ಮಾರುತಿ ಬಲೀನೊ ಕಾರನ್ನೂ ಗೆಲ್ಲುವಿರಿ ಎಂದು ನಂಬಿಸಿ ನಿಶ್ಮಿತ್ ಶೆಟ್ಟಿ ಅವರಿಂದ ಬೇರೆ ಬೇರೆ ಖಾತೆಗಳಿಗೆ ₹ 7,93 ಲಕ್ಷ ಜಮೆ ಮಾಡಿಸಿಕೊಂಡಿದ್ದಾರೆ.

ಬಳಿಕ ನಿಶ್ಮಿತ್ ಅವರಿಗೆ ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು