ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1 ಲಕ್ಷ ಕಳೆದುಕೊಂಡ ಯುವಕ

Last Updated 5 ಡಿಸೆಂಬರ್ 2022, 4:34 IST
ಅಕ್ಷರ ಗಾತ್ರ

ಉಡುಪಿ: ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ನಂಬಿಸಿ ಭರತ್ ಎಂಬುವರಿಗೆ ₹ 1,01,670 ವಂಚನೆ ಎಸಗಲಾಗಿದೆ.

ವಂಚಕರು ಭರತ್ ಮೊಬೈಲ್‌ಗೆ ಲಿಂಕ್‌ ಕಳಿಸಿದ್ದು ಅದನ್ನು ಕ್ಲಿಕ್ ಮಾಡಿದಾಗ ವೆಬ್‌ಸೈಟ್‌ ಪುಟ ತೆರೆದುಕೊಂಡಿದೆ. ಲಾಗಿನ್ ಮಾಡಿದ ಬಳಿಕ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ ಪುಟ ತೆರೆದುಕೊಂಡಿದ್ದು ಅದರಲ್ಲಿ ನೋಂದಣಿ ಮಾಡಿಕೊಂಡು ವ್ಯಾಲೆಟ್ ತೆರೆಯುವಂತೆ ಸೂಚನೆ ಬಂದಿದೆ.

ವಂಚಕರ ಸೂಚನೆಯಂತೆ ನೋಂದಣಿ ಮಾಡಿಸಿಕೊಂಡ ಭರತ್‌ ವ್ಯಾಲೆಟ್‌ ತೆರೆದು ₹ 964 ಹಣ ಹಾಕಿದ್ದಾರೆ. ಅದೇ ದಿನ ಅವರಿಗೆ ₹ 1,330 ಖಾತೆಗೆ ಜಮೆಯಾಗಿದೆ. ಇದನ್ನು ನಂಬಿ ಮತ್ತೆ ಗೂಗಲ್ ಪೇ ಮೂಲಕ ಹಂತಹಂತವಾಗಿ ₹ 84,630 ಹಾಗೂ ಸ್ನೇಹಿತ ಮನೋಜ್ ಎಂಬುವರಿಂದ ₹ 17,040 ಹಣವನ್ನು ವ್ಯಾಲೆಟ್‌ಗೆ ಹಾಕಿದ್ದಾರೆ.

ಬಳಿಕ ಮೋಸ ಹೋಗಿರುವುದು ಬಯಲಾಗಿದೆ. ಈ ಸಂಬಂಧ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT