ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಲ್ಲಿ ಯುವಕರಿಗೆ ವಿಪುಲ ಅವಕಾಶ: ಡಾ. ಹೆರಾಲ್ಡ್

Last Updated 27 ಜುಲೈ 2022, 2:37 IST
ಅಕ್ಷರ ಗಾತ್ರ

ಶಿರ್ವ: ವೀರ ಸೈನಿಕರ ಜೀವನವನ್ನು ಗೌರವಿಸಲು ಜು.26 ರಂದು ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತದೆ. ಯುವಕರಿಗೆ ಇಂದು ಸೇನೆಯಲ್ಲಿ ಹಲವು ಅವಕಾಶಗಳಿವೆ. ಎನ್.ಸಿ.ಸಿ ಮಾರ್ಗಗಳಿಂದ ದೇಶ ಸೇವೆ ಮಾಡಲು ಕೆಡೆಟ್‌ಗಳು ಮುಂದಾಗಬೇಕು ಎಂದು ಶಿರ್ವ ಸೈಂಟ್ ಮೇರಿ ಮಹಾವಿದ್ಯಾಲಯದಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ಹೇಳಿದರು.

ಕಾಲೇಜಿನ ರಾಷ್ಟ್ರೀಯ ಭೂ-ಯುವ ಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ 23ನೇ ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮದಲ್ಲಿ ಇವರು ಮಾತನಾಡಿದರು.

ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಯಶೋದಾ ಇದ್ದರು. ವಿಶಾಲ್ ಎಸ್. ಮೂಲ್ಯ ಸ್ವಾಗತಿಸಿದರು. ಹರ್ಷಿತ ಪ್ರಾಸ್ತವಿಕವಾಗಿ ಮಾತನಾಡಿದರು. ಸುರಕ್ಷಾ ವಂದಿಸಿದರು. ಆನ್‍ರಿಯಾ ನೇವಿಲ್ ಕಾರ್ಯಕ್ರಮ
ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT