ಬಿಜೆಪಿ ಕಚೇರಿಯಲ್ಲಿ ಹಿಂದಿ ಹಾಡಿಗೆ ಭರ್ಜರಿ ನೃತ್ಯ

7
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮಹಿಳಾ ಕಾರ್ಯಕರ್ತೆಯರ ಡಾನ್ಸ್‌

ಬಿಜೆಪಿ ಕಚೇರಿಯಲ್ಲಿ ಹಿಂದಿ ಹಾಡಿಗೆ ಭರ್ಜರಿ ನೃತ್ಯ

Published:
Updated:
Deccan Herald

ಉಡುಪಿ: ನಗರದ ಬಿಜೆಪಿ ಕಚೇರಿಯಲ್ಲಿ ಮಹಿಳಾ ಬಿಜೆಪಿ ಸದಸ್ಯರು ‘ರಂಗೀಲಾ ಮಾರೋ ಡೋಲನಾ’ ಎಂಬ ಹಿಂದಿ ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಪಕ್ಷದ ಮಹಿಳಾ ಪದಾಧಿಕಾರಿಗಳು ಕಚೇರಿಯಲ್ಲಿಯೇ ಪಕ್ಷದ ಧ್ವಜ ಹಿಡಿದು ಹಾಡಿನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ವಯಸ್ಸಿನ ಭೇದ ಮರೆತು ಕುಣಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್‌ ಆಗಿದೆ.

ಲೋಕಸಭೆ ಚುನಾವಣೆ ಸಂಭ್ರಮಾಚರಣೆಗೆ ಬಿಜೆಪಿ ಮಹಿಳಾ ಕಾರ್ಯಕರ್ತರು ಈಗಿನಿಂದಲೇ ತಾಲೀಮು ಶುರುಮಾಡಿಕೊಂಡಿದ್ದಾರೆ ಎಂದು ಕೆಲವರು ಫೇಸ್‌ಬುಕ್‌ನಲ್ಲಿ ಕಾಲೆಳೆದಿದ್ದಾರೆ.

ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ‘ಇದು ಕಳೆದ ವರ್ಷದ ಆಷಾಡ ಕೂಟದಲ್ಲಿ ಮಾಡಿದ ನೃತ್ಯ. ಈ ಬಾರಿ ಪಕ್ಷದಿಂದ ಇನ್ನೂ ಆಷಾಡ ಕೂಟ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !