ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ| ಭತ್ತ: ಸಕಾಲದಲ್ಲಿ ಬೆಂಬಲ ಬೆಲೆ ಸಿಗಲಿ

ಸಿ.ಎ ಬ್ಯಾಂಕ್ ಶಾಖಾ ಕಟ್ಟಡ ಉದ್ಘಾಟಿಸಿದ ಎಂ.ಎನ್. ರಾಜೇಂದ್ರ ಕುಮಾರ್
Last Updated 20 ಫೆಬ್ರುವರಿ 2023, 5:46 IST
ಅಕ್ಷರ ಗಾತ್ರ

ಬ್ರಹ್ಮಾವರ: ‘ಕರಾವಳಿಯ ರೈತರಿಗೂ ಕಟಾವು ಕಾರ್ಯ ಮುಗಿಯುತ್ತಿದ್ದಂತೆಯೇ ಬೆಂಬಲ ಬೆಲೆ ಸಿಗುವಂತಾಗಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

ಕೋಟ ಸಹಕಾರಿ ವ್ಯವಸಾಯಕ ಸಂಘದ ಕೋಡಿ ನೂತನ ಶಾಖಾ ಕಟ್ಟಡ, ಗೋದಾಮು ಮತ್ತು ವಸತಿ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕರಾವಳಿಯಲ್ಲಿ ಕಬ್ಬು ಬೆಳೆದರೂ ಸಕ್ಕರೆ ಕಾರ್ಖಾನೆ ಪುನಃ ಆರಂಭಿಸಲು ಸಾಧ್ಯವಿಲ್ಲ. ಉತ್ತರ ಮತ್ತು ದಕ್ಷಿಣ ಕರ್ನಾಟಕದಿಂದ ಕಬ್ಬು ಖರೀದಿಸಿದಲ್ಲಿ ಕಾರ್ಖಾನೆ ಆರಂಭಿಸಬಹುದು ಎಂದ ಅವರು, ಕರಾವಳಿಯಲ್ಲಿ ಸಹಕಾರಿ ಕ್ಷೇತ್ರ ವಿಕಸನಗೊಂಡಿದೆ. ಇನ್ನೊಂದೆಡೆ ನಮ್ಮ ಭಾಷೆ, ಸಂಸ್ಕೃತಿ ತಿಳಿಯದವರೇ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇರುವುದರಿಂದ ಬ್ಯಾಂಕಿಂಗ್‌ ಕ್ಷೇತ್ರ ನಿಧಾನವಾಗಿ ಗ್ರಾಹಕರಿಂದ, ಅದರಲ್ಲೂ ಗ್ರಾಮೀಣ ಭಾಗದ ಜನರಿಂದ ದೂರವಾಗುತ್ತಿದೆ’ ಎಂದರು.

ಇದಕ್ಕೂ ಮುನ್ನ ಅವರು ಬ್ಯಾಂಕ್‌ನ 25ನೇ ನೂತನ ಶಾಖಾ ಕಟ್ಟಡ ಉದ್ಘಾಟಿಸಿದರು.

ಭದ್ರತಾ ಕೊಠಡಿ ಉದ್ಘಾಟಿಸಿದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿ, ‘ಬ್ಯಾಂಕ್‌ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸ್ಥಳೀಯ ಯುವಕ ಯುವತಿಯರು ಉದ್ಯೋಗ ಪಡೆಯು ವಂತಾಗಲು ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಬೇಕು. ಮನೆ ಬಾಗಿಲಿನಲ್ಲಿರುವ ಸಹಕಾರಿ ಕ್ಷೇತ್ರದ ಲಾಭ ಕೃಷಿಕರು ಪಡೆದು ಮರುಪಾವತಿ ಯನ್ನೂ ಸಕಾಲಕ್ಕೆ ಮಾಡಿ’ ಎಂದು ಹೇಳಿದರು.

ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಗೋದಾಮು ಕಟ್ಟಡ, ವಸತಿ ಕಟ್ಟಡವನ್ನು ಉದ್ಘಾಟಿಸಲಾಯಿತು. ಫಲಾನುಭವಿಗಳಿಗೆ ಚೆಕ್‌ ವಿತರಿಸ ಲಾಯಿತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ
ಉಪಾಧ್ಯಕ್ಷ ಕಿರಣ್‌ ಕೊಡ್ಗಿ ಸುತ್ತುನಿಧಿ ಹಸ್ತಾಂತರಿಸಿದರು.

ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಎಂ. ಶಿವರಾಮ‌ ಶೆಟ್ಟಿ, ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಪ್ರಭಾಕರ ಮೆಂಡನ್‌, ಪ್ರಮುಖರಾದ ಶಂಭು ಪೂಜಾರಿ, ಅಶೋಕ್‌ ತಿಂಗಳಾಯ, ಶಾಖಾ ವ್ಯವಸ್ಥಾಪಕ ಕೆ.ಸುಧೀರ ಹಂದೆ, ಸಂಘದ ಉಪಾಧ್ಯಕ್ಷ ರಾಜೀವ ದೇವಾಡಿಗ, ಮಾಧವ ಉಪಾಧ್ಯ, ಮಾರಿಕಾಂಬಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಕೆ. ಮತ್ತು ಸಂಘದ ನಿರ್ದೇಶಕರು ಇದ್ದರು.

ನಿವೃತ್ತ ಯೋಧರಾದ ಗಣೇಶ್‌ ಅಡಿಗ ಮತ್ತು ವಿನೋದ್‌ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಹಿರಿಯರಾದ ಶಂಕರ ಕುಂದರ್, ಲಕ್ಷ್ಮಣ ಸುವರ್ಣ, ಡಾ.ಕೆ. ಕೃಷ್ಣ ಕಾಂಚನ್‌, ಮಾಜಿ ನಿರ್ದೇಶಕರು, ಕಟ್ಟಡದ ವಾಸ್ತು ಶಿಲ್ಪಿ, ಗುತ್ತಿಗೆದಾರರನ್ನು ಗೌರವಿಸಲಾಯಿತು.

ಶಾಖಾ ಸಭಾಪತಿ ಡಾ.ಕೆ. ಕೃಷ್ಣ ಕಾಂಚನ್‌ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶರತ್‌ ಕುಮಾರ್‌ ಶೆಟ್ಟಿ ವರದಿ ವಾಚಿಸಿ ವಂದಿಸಿದರು. ಅಧ್ಯಾಪಕ ಪ್ರಶಾಂತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT