ಪಡುಬಿದ್ರಿ: ಬೆಳಪು ವ್ಯವಸಾಯ ಸಹಕಾರಿ ಸಂಘ ಪ್ರಸಕ್ತ ವಾರ್ಷಿಕ ₹2.25 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 14 ಡಿವಿಡೆಂಡ್ ನೀಡಲಾಗುವುದು ಎಂದು ಬೆಳಪು ಸಹಕಾರಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2025–26ನೇ ಸಾಲಿನಲ್ಲಿ ವಾರ್ಷಿಕ ವ್ಯವಹಾರದೊಂದಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿನ ಪ್ರಗತಿ ದಾಖಲಿಸಿ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸಾಧನೆ ಮಾಡಿದೆ. ಸಂಘವು ಗ್ರಾಹಕರ ವಿಶ್ವಾಸಪರತೆಯಿಂದ ಮುಂದಿನ ವರ್ಷ ₹1 ಸಾವಿರ ಕೋಟಿ ವಾರ್ಷಿಕ ವ್ಯವಹಾರ ನಡೆಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.

ಸುಮಾರು 309ಕ್ಕೂ ಮಿಕ್ಕಿ ನವೋದಯ ಸ್ವಸಹಾಯ ಸಂಘಗಳನ್ನು ರಚಿಸಿ ಅದರ ಸದಸ್ಯರ ಬೇಡಿಕೆಗೆ ಅನುಗುಣವಾಗಿ ₹3.20 ಕೋಟಿ ಸಾಲ ಸೌಲಭ್ಯ, ಇತರ ಸೇವೆಗಳನ್ನು ನೀಡಲಾಗುತ್ತಿದೆ. ಠೇವಣಿದಾರರಿಗೆ ಆಕರ್ಷಕ ಬಡ್ಡಿದರದೊಂದಿಗೆ ವಿಮಾ ಸೌಲಭ್ಯ ನೀಡಲಾಗುತ್ತಿದೆ. ಸಂಪೂರ್ಣ ಕಂಪ್ಯೂಟರೀಕೃತ ಬ್ಯಾಂಕಿಂಗ್ ವ್ಯವಸ್ಥೆ, ದಿನದ 24 ಗಂಟೆಯೂ ಆಧುನಿಕ ಶೈಲಿಯ ತಂತ್ರಜ್ಞಾನ ಭದ್ರತಾ ವ್ಯವಸ್ಥೆ, ಗ್ರಾಹಕರ ಸೌಲಭ್ಯಕ್ಕೆ ಹೊಂದುವಂತೆ ಬಡಾ ಉಚ್ಚಿಲ, ಪಣಿಯೂರಿನ ಪ್ರಧಾನ ಕಚೇರಿಯಲ್ಲಿ ಸೇಫ್ಲಾಕರ್ ಸೌಲಭ್ಯ ಕಲ್ಪಿಸಲಾಗಿದೆ. ಯುವಕರಿಗೆ, ಮಹಿಳೆಯರಿಗೆ ಸ್ವಉದ್ಯೋಗ, ಕೈಗಾರಿಕೆಗೆ ಸಾಲ, ಚಿನ್ನಾಭರಣ, ವಸತಿ ಸಹಿತ ಎಲ್ಲಾ ರೀತಿಯ ಸಾಲ ಗ್ರಾಹಕರಿಗೆ ನೀಡಲಾಗುತ್ತಿದೆ. ಸಂಘದ ಎಲ್ಲಾ ಶಾಖೆಗಳಲ್ಲಿ ಪಡಿತರ ವಿತರಣಾ ಕೇಂದ್ರ, ಪ್ರಧಾನ ಕಚೇರಿಯಲ್ಲಿ ರೈತರಿಗೆ ರಾಸಾಯನಿಕ ಗೊಬ್ಬರ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ

ಸರ್ಕಾರ ಅಥವಾ ಯಾವುದೇ ಆರ್ಥಿಕ ಸಂಸ್ಥೆಯಿಂದ ಸಾಲ ಪಡೆಯದೆ ಸ್ವತಂತ್ರವಾಗಿ ವ್ಯವಹಾರ ನಡೆಸುತ್ತಿದೆ. ಸಂಘವು 2001–02ರಿಂದ ಉತ್ತಮ ಪ್ರಗತಿ ಸಾಧಿಸುತ್ತಾ ಬಂದಿದ್ದು, ಲೆಕ್ಕಪರಿಶೋಧನಾ ಇಲಾಖೆಯಿಂದ ‘ಎ’ ಶ್ರೇಣಿಯ ಸಹಕಾರಿ ಸಂಘವಾಗಿ ಪರಿವರ್ತನೆಗೊಂಡಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ 11 ವರ್ಷಗಳಿಂದ ಅತ್ಯುತ್ತಮ ಸಹಕಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಿದೆ. ಅತ್ಯುತ್ತಮ ಲಾಭದೊಂದಿಗೆ ಸಾಲ ವಸೂಲಾತಿಯಲ್ಲಿ ಶೇ 98 ಸಾಧನೆ ದಾಖಲಿಸಿದೆ. ಆರ್ಥಿಕವಾಗಿ ಹಿಂದುಳಿದವರು, ಅನೇಕ ಸಂಘ ಸಂಸ್ಥೆಗಳಿಗೆ, ಸಂಘದ ವ್ಯಾಪ್ತಿಯ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸ್ಥಳೀಯ ಉಚ್ಚಿಲ, ಬೆಳಪು, ಪಣಿಯೂರಿನ ಸರ್ಕಾರಿ ಶಾಲೆಯ ತಲಾ ಒಬ್ಬ ಶಿಕ್ಷಕರಿಗೆ ಸಂಭಾವನೆ ನೀಡುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡಿ ನೆರವಾಗುತ್ತಿದೆ. ಹಿರಿಯ ನಾಗರಿಕರಿಗೆ ಠೇವಣಾತಿಯಲ್ಲಿ ಶೇ 0.5 ಹೆಚ್ಚಿನ ಬಡ್ಡಿ, ಫೋನ್ ಬ್ಯಾಂಕಿಂಗ್ ವ್ಯವಸ್ಥೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-28-90387025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.