ಪಡುಬಿದ್ರಿ: ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ಇದೇ 26ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದೆ ಎಂದು ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಸಹಕಾರ ರತ್ನ ಎಂ.ಎನ್. ರಾಜೇಂದ್ರಕುಮಾರ್ ಮೆರವಣಿಗೆಗೆ ಚಾಲನೆ ನೀಡಲಿದ್ದು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಪಡುಬಿದ್ರಿ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಮನೆ-ಮನೆಯಿಂದ ಹೊರೆಕಾಣಿಕೆಗೆ ಸಂಕಲ್ಪ ಕೈಗೊಂಡು ಕಾಪು ಕ್ಷೇತ್ರದ ಪ್ರತಿ ಗ್ರಾಮಗಳಿಂದಲೂ, ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹೊರೆಕಾಣಿಕೆ ಬರುವ ಬಗ್ಗೆ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿದೆ. ದ.ಕ. ಜಿಲ್ಲೆಯ ಸಂಚಾಲಕ ಚಂದ್ರಹಾಸ ಶೆಟ್ಟಿ ಬಂಟ್ವಾಳ ನೇತೃತ್ವದಲ್ಲಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಮಂಗಳೂರು, ಬಂಟ್ವಾಳ, ಸುರತ್ಕಲ್, ಉಳ್ಳಾಲ, ಬೆಳ್ತಂಗಡಿ, ಪುತ್ತೂರು ಭಾಗದಿಂದ ಹೊರೆಕಾಣಿಕೆ ಸಮರ್ಪಣೆ ಮಾಡುವ ಬಗ್ಗೆ ಸಿದ್ಧತೆ ನಡೆದಿದೆ ಎಂದು ಹೇಳಿದರು.

ಮೋಹನ್ ಆಳ್ವ ನೇತೃತ್ವದಲ್ಲಿ ಮೂಡಬಿದ್ರೆಯ ಭಾಗದಿಂದ, ರಾಜ್ಯ ಕಂಬಳ ಅಸೋಸಿಯೇಷನ್ ಮೂಲಕ ಕಂಬಳದ ವ್ಯವಸ್ಥಾಪಕರು, ಕೋಣದ ಯಜಮಾನರು, ಕಾಪು ಹೊಸ ಮಾರಿಗುಡಿಯಿಂದ 99 ವಾಹನಗಳೊಂದಿಗೆ, ಡಾ. ಜಿ.ಶಂಕರ್ ನೇತೃತ್ವದ ಮೊಗವೀರ ಮಹಾಸಭಾ ಮತ್ತು ಉಚ್ಚಿಲ ಮಹಾಲಕ್ಷ್ಮೀ ಸನ್ನಿಧಾನದಿಂದ 100 ವಾಹನಗಳಲ್ಲಿ, ಬಿಲ್ಲವರ ಯುವ ಬಳಗದಿಂದ 1,200ಕ್ಕೂ ಮಿಕ್ಕಿ ಅಕ್ಕಿ ಚೀಲಗಳು, ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ಬಂಟರ ಸಂಘಗಳಿಂದ ಹಾಗೂ ವಿವಿಧ ಸಂಘಗಳಿಂದ, ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರಿಂದ ಉಲ್ಲಾಯನ ಸನ್ನಿಧಾನಕ್ಕೆ ಹೊರೆಕಾಣಿಕೆ ಬರಲಿದೆ ಎಂದು ಅವರು ತಿಳಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುಖಂಡ ವಿನಯಕುಮಾರ್ ಸೊರಕೆ, ಆನುವಂಶಿಕ ಆಡಳಿತ ಮೊಕ್ತೇಸರರಾದ ಕಿನ್ನಕ್ಕರಾಜ್ ರತ್ನಾಕರ ರಾಜ್ ಅರಸರು ಪಡುಬಿದ್ರಿ ಬೀಡು, ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಶ್ರೀಪತಿ ಕೊರ್ನೆಯ ಸಹಿತ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಹಸಿರು ಹೊರೆಕಾಣಿಕೆ ಸಾಗುವ ದಾರಿ: ಮಂಗಳೂರು ಕಡೆಯಿಂದ ಬರುವ ಹಸಿರು ಹೊರೆಕಾಣಿಕೆ ವಾಹನಗಳು ಎರ್ಮಾಳು ಮಸೀದಿ ಬಳಿಯಾಗಿ ತಿರುಗಿಸಿ, ಎರ್ಮಾಳು ನಾರಳ್ತಾಯ ದೇವಸ್ಥಾನದ ಬಳಿಯಿಂದ ಸಾಲಾಗಿ ನಿಲ್ಲಬೇಕು. ಉಡುಪಿ ಕಡೆಯಿಂದ ಬರುವ ವಾಹನಗಳು ಜನಾರ್ದನ ದೇವಸ್ಥಾನದ ಬಳಿಯಿಂದ ಉಚ್ಚಿಲದವರೆಗೆ ಏಕಮುಖವಾಗಿ ನಿಲ್ಲಬೇಕು. ಗುಂಡ್ಲಾಡಿ ಕಟ್ಟೆಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. 1000 ವಾಹನ 10 ಸಾವಿರಕ್ಕೂ ಮಿಕ್ಕಿ ಭಕ್ತರ ಸಂಗಮವಾಗಲಿದೆ. ಮೆರವಣಿಗೆಯಲ್ಲಿ 12ಕ್ಕೂ ಅಧಿಕ ಟ್ಯಾಬ್ಲೋಗಳು, ಕುಣಿತ ಭಜನೆ ತಂಡ, ವಿವಿಧ ಬಿರುದಾವಳಿಗಳು ಭಾಗವಹಿಸಲಿವೆ. ಪಡುಬಿದ್ರಿ ದೇವಸ್ಥಾನದಲ್ಲಿ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಗುಂಡ್ಲಾಡಿ ಕಟ್ಟೆ ಬಳಿ ಖಾಸಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹೊರೆಕಾಣಿಕೆ ಸಮರ್ಪಿಸಿದವರಿಗೆ ದೇವರ ಪ್ರಸಾದದೊಂದಿಗೆ ಅನುಗ್ರಹ ಪತ್ರ ನೀಡಲಾಗುವುದು ಎಂದು ಹೇಳಿದರು.

ಸಮಿತಿಯ ಚಂದ್ರಹಾಸ ಶೆಟ್ಟಿ ಬಂಟ್ವಾಳ, ದಯಾನಂದ ಹೆಜಮಾಡಿ, ಗೀತಾಂಜಲಿ ಸುವರ್ಣ, ರವಿ ಶೆಟ್ಟಿ ಗುಂಡ್ಲಾಡಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಹರೀಶ್ ಕೆ. ಶೆಟ್ಟಿ ಪಾದೆಬೆಟ್ಟು, ಧನಪಾಲ್ ಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-28-159121116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.