ಪಡುಬಿದ್ರಿ: ‘ದಫ್ ಕಲೆ ಯುವಜನರಲ್ಲಿ ಶಿಸ್ತು, ಸಹೋದರತ್ವ, ಧಾರ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯುವಜನರು ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಇಲ್ಲಿನ ಜುಮಾ ಮಸೀದಿ ಖತೀಬ್ ಟಿ.ಎಚ್. ಝನುದ್ದೀನ್ ಸಖಾಫಿ ಹೇಳಿದರು.

ಜುಮಾ ಮಸೀದಿ ಆವರಣದಲ್ಲಿ ಸೋಮವಾರ ಖಿದ್ಮತುಲ್ ಅನಾಂ ಅಸೋಸಿಯೇಶನ್ ವತಿಯಿಂದ ದಫ್ ತಂಡದ ಉದ್ಘಾಟನಾ ಸಮಾರಂಭ, ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಸೀದಿ ಅಧ್ಯಕ್ಷ ಮುಹಿಯುದ್ದೀನ್ ಲಚ್ಚಿಲ್ ದಫ್ ತಂಡಕ್ಕೆ ಚಾಲನೆ ನೀಡಿದರು. ದಫ್ ತರಬೇತುದಾರರಾದ ಬಶೀರ್ ಉಸ್ತಾದ್ ಮಜೂರು, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಖಜಾಂಚಿ ಎ.ಎಚ್. ಮುಹಮ್ಮದ್, ಉಪಾಧ್ಯಕ್ಷ ಭಾಷಾ, ಜತೆ ಕಾರ್ಯದರ್ಶಿ ಅಕ್ಬರ್, ಸದಸ್ಯ ಶಫಿ ಎಂ.ಎಸ್, ಗ್ರಾಮ ಪಂಚಾಯಿತಿ ಸದಸ್ಯ ರಮೀಝ್ ಹುಸೈನ್, ಇನಾಯತುಲ್ ಮಸಾಕೀಯೀನ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಖಾದರ್ ಮಜಲಕೋಡಿ, ಕಾರ್ಯದರ್ಶಿ ಪಿ.ಎಂ. ಹಮೀದ್, ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಮೀದ್ ಪಡುಬಿದ್ರಿ, ಖಿದ್ಮತುಲ್ ಅನಾಂ ಅಸೋಸಿಯೇಶನ್ ಅಧ್ಯಕ್ಷ ಮುಸ್ತಾಕ್ ಭಾಗವಹಿಸಿದ್ದರು. ಅಶ್ರಫ್ ಕಾಡಿಪಟ್ಣ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-28-1985160145

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.