ಪಡುಬಿದ್ರಿ: ಶ್ರೀ ಪಲಿಮಾರು ಮಠದಲ್ಲಿ ಮಾ.30ರಿಂದ ಏ.2ರವರೆಗೆ ಹನುಮಜ್ಜಯಂತಿ ಮಹೋತ್ಸವ ನಡೆಯಲಿದ್ದು ಯೋಗದೀಪಿಕಾ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ವೇದಶಾಸ್ತ್ರದಿಗಳ ಘಟಿಕೋತ್ಸವ 30ರಂದು ನಡೆಯಲಿದೆ.

31ರಂದು ಪವಮಾನ ಹೋಮ ಗಳು ನಡೆಯಲಿದ್ದು ಯೋಗದೀಪಿಕಾ ಗ್ರಂಥಗಳ ಕುರಿತು ವಿಚಾರಗೋಷ್ಠಿ ಇರು ತ್ತದೆ. ರಾಜಗೋಪಾಲ ಉಪಾಧ್ಯಾಯ ಕುತ್ಯಾರು ಅಧ್ಯಕ್ಷತೆ ವಹಿಸಲಿದ್ದು ಸುದರ್ಶನ ಭಟ್, ಸುಧೀಂದ್ರ ಆಚಾರ್ಯ ಕಲ್ಮಂಜೆ ವಿಷಯ ಮಂಡಿಸಲಿದ್ದಾರೆ.

ರಾಜರಾಜೇಶ್ವರತೀರ್ಥ ಶ್ರೀಪಾದರ ಸ್ಮರಣಾರರ್ಥ ಲಕ್ಷ್ಮೀನಾರಾಯಣ ಆಸ್ರಣ್ಣ ಅವರಿಗೆ ಶ್ರೀರಾಜರಾಜೇಶ್ವರ ಪ್ರಶಸ್ತಿ, ವಿದ್ಯಾಮಾನ್ಯತೀರ್ಥ ಶ್ರೀಪಾದರ ಸ್ಮರಣಾರ್ಥ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ಯಕ್ಷವಿದ್ಯಾ ಮಾನ್ಯ ಹಾಗೂ ಪೆರ್ಣoಕಿಲ ಯಜ್ಞನಾರಾಯಣ ಭಟ್ ಅವರಿಗೆ ಪಾಕವಿದ್ಯಾ ಮಾನ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ.

ವಿಶ್ವಪ್ರಿಯತೀರ್ಥ ಶ್ರೀ, ವಿದ್ಯಾಧೀಶತೀರ್ಥ ಶ್ರೀ, ವಿಶ್ವಪ್ರಸನ್ನತೀರ್ಥ ಶ್ರೀ, ವಿದ್ಯಾವಲ್ಲಭತೀರ್ಥ ಶ್ರೀ, ವಿದ್ಯಾಪ್ರಸನ್ನತೀರ್ಥ ಶ್ರೀ, ರಘವರೇಂದ್ರತೀರ್ಥ ಶ್ರೀ, ಈಶಪ್ರಿಯತೀರ್ಥ ಶ್ರೀ, ವಿದ್ಯಾರಾಜೇಶ್ವರತೀರ್ಥ ಶ್ರೀ ಭಾಗವಹಿಸಲಿದ್ದಾರೆ.

30ರಂದು ಸಂಜೆ ಯೋಗದೀಪಿಕಾ ವಿದ್ಯಾರ್ಥಿಗಳಿಂದ ಹರಿನಾಮಸಂಕೀರ್ತನೆ ಗೋಷ್ಠಿಗಾನ, 31ರಂದು ವಾಸುದೇವೋತ್ಪತ್ತಿ ತಾಳಮದ್ದಳೆ, ತೆಂಕುತಿಟ್ಟು ಯಕ್ಷಗಾನ ಶ್ರೀಕೃಷ್ಣಮುಖ್ಯಪ್ರಾಣ ಯುವಹವ್ಯಾಸಿ ಯಕ್ಷಗಾನ ಬಳಗದಿಂದ ಗಜೇಂದ್ರ ಮೋಕ್ಷ, ಏ.1ರಂದು ಸಾಧ್ವೀಮಾಧ್ವೀಪಾಠಾಶಾಲಾ ಬಾಲ ವಿದ್ಯಾರ್ಥಿಗಳಿಂದ ಸಂಸ್ಕೃತ ನಾಟಕ ನಡೆಯಲಿದೆ ಎಂದು ಉಡುಪಿ ಶ್ರೀ ಪಲಿಮಾರು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-28-491325540

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.