ಪಡುಬಿದ್ರಿ: ಇಲ್ಲಿನ ಕಡಲ್ ಫಿಶ್ ಕ್ರಿಕೆಟರ್ಸ್ ಆಯೋಜಿಸಿರುವ ಹೊನಲು ಬೆಳಕಿನ ಟೆನಿಸ್‌ಬಾಲ್ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿ ‘ಕಡಲ್ ಫಿಶ್ ಟ್ರೋಫಿ’ ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ನ.16,17 ಮತ್ತು 18ರಂದು ನಡೆಯಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘಟಕ ಚೇತನ್, ಪ್ರಥಮ ಬಹುಮಾನವಾಗಿ ₹5 ಲಕ್ಷ ನಗದು, ಶಾಶ್ವತ ಫಲಕ, ದ್ವಿತೀಯ ₹ 3 ಲಕ್ಷ ನಗದು, ಶಾಶ್ವತ ಫಲಕ ನೀಡಲಾಗುವುದು. ವೈಯಕ್ತಿಕವಾಗಿ ಪಂದ್ಯಶ್ರೇಷ್ಠ, ಸರಣಿಯ ಶ್ರೇಷ್ಠ ಆಟಗಾರ, ಉತ್ತಮ ಬೌಲರ್, ಉತ್ತಮ ಬ್ಯಾಟರ್ ಪ್ರಶಸ್ತಿ ನೀಡಲಾಗುವುದು ಎಂದರು.
ಮಧ್ಯಪ್ರದೇಶ ಹಾಗೂ ಛತ್ತೀಸಗಡದಿಂದ ತಂಡಗಳು ಬರಲಿದ್ದು, ಒಟ್ಟು 22 ತಂಡಗಳು ಭಾಗವಹಿಸಲಿವೆ. ಟೂರ್ನಿಯಲ್ಲಿ ಉಳಿಕೆಯಾದ ಹಣವನ್ನು ಅಶಕ್ತರಿಗೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಅಶೋಕ್ ಸಾಲ್ಯಾನ್, ಪಾಂಡು ಕರ್ಕೇರ, ಪ್ರಶಾಂತ್, ಕೃಷ್ಣ ಬಂಗೇರ, ವಸಂತ್, ಕರುಣಾಕರ ಪೂಜಾರಿ, ರಮೀಜ್ ಹುಸೇನ್, ಸುಭಾಶ್ ಕಾಮತ್ ಇದ್ದರು.