ಪಡುಬಿದ್ರಿ: ಇಲ್ಲಿ ಹರಿಯುವ ಕಾಮಿನಿ ನದಿ ಕಸದ ಎಸೆತದಿಂದ ಮಲಿನವಾಗುತ್ತಿರುವ ಹಿನ್ನಲೆಯಲ್ಲಿ, ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಯುವಕರ ತಂಡ ಜಾಗೃತಿ ಫಲಕ ಅಳವಡಿಸಿದೆ.

ಕಾಮಿನಿ ನದಿ ಎಲ್ಲೂರಿನಲ್ಲಿರುವ ದಳಂತರ ಕೆರೆಯಿಂದ ಉಗಮವಾಗಿ ಎಲ್ಲೂರು, ಕುಂಜೂರು ದೇವಸ್ಥಾನ, ಅದಮಾರು ಮೂಡೆಟ್ಟು, ಎರ್ಮಾಳು, ಪಡುಬಿದ್ರಿಯಲ್ಲಿ ಹಾದು ಎಂಡ್ಪಾಯಿಂಟ್ ಮೂಲಕ ಸಮುದ್ರ ಸೇರುತ್ತದೆ. ಒಂದು ಕಾಲದಲ್ಲಿ ಸ್ವಚ್ಛವಾಗಿ ಹರಿದು ಸ್ಥಳೀಯರ ದೈನಂದಿನ ಬಳಕೆ, ಕೃಷಿಗೂ ಆಧಾರವಾಗಿದ್ದ ಈ ನದಿ ಇಂದು ನಿರ್ಲಕ್ಷ್ಯ, ಮಾನವ ಕ್ರಿಯೆಗಳ ಪರಿಣಾಮವಾಗಿ ಸ್ವರೂಪ ಕಳೆದುಕೊಂಡಿದೆ.

ನದಿಯೊಳಗೆ ತ್ಯಾಜ್ಯ ವಿಸರ್ಜನೆ, ಪ್ಲಾಸ್ಟಿಕ್, ಕಸದ ರಾಶಿ, ಒಳಚರಂಡಿ ನೀರಿನ ಸೇರ್ಪಡೆ ಇವುಗಳಿಂದ ಕಲುಷಿತಗೊಂಡಿದೆ. ಇದರ ಪರಿಣಾಮವಾಗಿ ನೀರಿನ ಗುಣಮಟ್ಟ ಕುಸಿದಿದ್ದು ಜಲಚರಗಳಿಗೂ ಅಪಾಯ ಎದುರಾಗಿದೆ. ಪರಿಸರದ ಸಮತೋಲನಕ್ಕೂ ಹಾನಿ ಉಂಟಾಗಿದೆ. ಯುವಕರು ಫಲಕದಲ್ಲಿ ‘ನದಿಗೆ ಕಸ ಎಸೆಯಬೇಡಿ, ಪರಿಸರ ಕಾಪಾಡಿ ಎಂಬ ಸಂದೇಶ ಸಾರಿದ್ದು, ಸ್ಥಳೀಯರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಭಾಗಕ್ಕೆ ಬರುವ ಪ್ರವಾಸಿಗರು ನದಿಗೆ ಕಸ, ತ್ಯಾಜ್ಯ ಎಸೆಯುವುದು ಕಂಡುಬಂದಿದೆ. ಹಲವು ಬಾರಿ ಪ್ರವಾಸಿಗರಿಗೆ ಜಾಗೃತಿ ಮೂಡಿಸಿದ್ದೇವೆ. ಈ ಭಾಗದ ಜನರೂ ನದಿಯನ್ನು ಕಲುಷಿತಗೊಳಿಸಬಾರದು. ಈ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಿ ನದಿಯ ಸ್ವಚ್ಛತೆಗೆ ಗಮಹರಿಸುತ್ತೇವೆ. ಫಲಕ ಅಳವಡಿಸಿ ‘ನದಿಯನ್ನು ಉಳಿಸಿ ನಮ್ಮ ನಡೆ ಸ್ವಚ್ಛತೆಯ ಕಡೆ’ ಎಂಬ ಫಲಕ ಅಳವಡಿಸಿದ್ದೇವೆ ಎನ್ನುತ್ತಾರೆ ಇಲ್ಲಿನ ಕರಾವಳಿ ಸ್ಟಾರ್ಸ್ ನಡಿಪಟ್ಣದ ಸಂತೋಷ್ ಸಾಲ್ಯಾನ್, ಕಿರಣ್ ರಾಜ್ ಕರ್ಕೇರ.

ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನದಿ ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಕಾಮಿನಿ ನದಿಯನ್ನು ಸಂರಕ್ಷಿಸಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯ. ಪರಿಸರ ಸಂರಕ್ಷಣೆಯತ್ತ ಜಾಗೃತಿ ಮೂಡಿಸಿ, ನದಿಯನ್ನು ಮರುಜೀವಗೊಳಿಸುವತ್ತ ಎಲ್ಲರೂ ಕೈಜೋಡಿಸಬೇಕು ಎನ್ನುತ್ತಾರೆ ಅವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-28-1177339402

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.