ಪಡುಬಿದ್ರಿ: ಕಾಪು ಮತ್ತು ಪಡುಬಿದ್ರಿ ಬೀಚ್ಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು ರಸ್ತೆ ಸಂಪರ್ಕದ ಸಮಸ್ಯೆ ಸವಾಲಾಗಿ ಪರಿಣಮಿಸಿದೆ.

ಕಾಪು ಬೀಚ್ ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಒಂದಾಗಿದ್ದು ಸುಂದರ ಸಮುದ್ರ ತೀರ ಹಾಗೂ ದೀಪಸ್ತಂಭ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದರೂ ರಸ್ತೆ ಸೌಕರ್ಯ ಸಮರ್ಪಕವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬೀಚ್ಗೆ ಸಂಪರ್ಕಿಸುವ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪ್ರವಾಸಿಗರು ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪಾದಚಾರಿಗಳಿಗೂ ಸುರಕ್ಷಿತವಾಗಿ ಸಂಚರಿಸುವುದು ಕಷ್ಟಕರವಾಗಿದೆ. ಕಾಪು ಬೀಚ್ಗೆ ರಾಷ್ಟ್ರೀಯ ಯ ಹೆದ್ದಾರಿ 66ರ ಮೂಲಕ ಕೊಪ್ಪಲಂಗಡಿ-ಮಾರಿಗುಡಿ ರಸ್ತೆ ಹಾಗೂ ಕೈಪುಂಜಾಲು ಮೂಲಕ ಬೀಚ್ ಸಂಪರ್ಕಿಸಲು ರಸ್ತೆ ವ್ಯವಸ್ಥೆ ಇದೆ. ಕೊಪ್ಪಲಂಗಡಿ ಮೂಲಕ ಸಾಗುವ ರಸ್ತೆ ಸ್ವಲ್ಪ ಮಟ್ಟಿಗೆ ಅಗಲವಾಗಿದ್ದರೂ, ಮಾರಿಗುಡಿ ಹಾಗೂ ಕೈಪುಂಜಾಲು ಮೂಲಕ ಸಾಗುವ ರಸ್ತೆ ತೀರಾ ಕಿರಿದಾಗಿದೆ. ಎರಡು ವಾಹನಗಳು ಎದುರುಬಂದರೆ ಸಂಚರಿಸುವುದೇ ಕಷ್ಟಕರವಾಗುತ್ತಿದೆ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಡುಬಿದ್ರಿ ಬೀಚ್ ಕೂಡ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಂಡು ಅಂತರರಾಷ್ಟ್ರೀಯ ಮಟ್ಟದ ಬ್ಲೂಫ್ಲ್ಯಾಗ್ ಮಾನ್ಯತೆ ಪಡೆದಿರುವ ಪಡುಬಿದ್ರಿ ಎಂಡ್ಪಾಯಿಂಟ್ ಬೀಚ್ಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೇಟೆಯಿಂದ ಬೀಚ್ಗೆ ಸಂಪರ್ಕಿಸುವ ಸುಮಾರು 3.5 ಕಿಲೋಮೀಟರ್ ರಸ್ತೆ ಹಾಗೂ ಕಾಮಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಳೆಯ ಸೇತುವೆ ಇಕ್ಕಟ್ಟಾಗಿದ್ದು, ಏಕಮುಖ ವಾಹನ ಸಂಚಾರಕ್ಕೆ ಮಾತ್ರ ಸೀಮಿತವಾಗಿದೆ. ಇದರಿಂದ ವಾರಾಂತ್ಯ ಹಾಗೂ ರಜಾದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ.

ಬ್ಲೂಫ್ಲ್ಯಾಗ್ ಬೀಚ್ನಿಂದ ನಡಿಪಟ್ಟವರೆಗಿನ ಸುಮಾರು 800 ಮೀಟರ್ ರಸ್ತೆಯನ್ನು ದ್ವಿಪಥ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಿದ್ದರೂ ಪ್ರಮುಖ ಸಂಪರ್ಕ ರಸ್ತೆ ಇನ್ನೂ ಕಿರಿದಾಗಿದೆ. ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದು ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ಪಾದಚಾರಿಗಳಿಗೆ ಪ್ರತ್ಯೇಕ ದಾರಿ ಇಲ್ಲದಿರುವುದರಿಂದ ಅಪಘಾತ ಭೀತಿ ಹೆಚ್ಚಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ ಎಂದು ಸ್ಥಳೀಯರಾದ ಸಂತೋಷ್ ಹೇಳುತ್ತಾರೆ.

ಪಡುಬಿದ್ರಿ ಬೀಡು ಪ್ರದೇಶದಿಂದ ಪಡುಹಿಟ್ಟು ಜಾರಂದಾಯ ದೈವಸ್ಥಾನ ಮಾರ್ಗವಾಗಿ ಸುಮಾರು 2.5 ಕಿಲೋಮೀಟರ್ ಉದ್ದದ ಹೊಸ ರಸ್ತೆ ನಿರ್ಮಿಸಿ ಬೀಚ್ ಸಂಪರ್ಕ ಕಲ್ಪಿಸುವ ಬೇಡಿಕೆಯೂ ಕೇಳಿಬಂದಿದೆ. ಜೊತೆಗೆ ತೆಂಕ ಎರ್ಮಾಳು ಮೀನುಗಾರಿಕಾ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಿದರೆ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಂಪರ್ಕ ರಸ್ತೆ ಹಾಗೂ ಸೇತುವೆ ಅಭಿವೃದ್ಧಿಪಡಿಸಿದಲ್ಲಿ ಕಾಪು ಮತ್ತು ಪಡುಬಿದ್ರಿ ಬೀಚ್ಗಳು ಜಿಲ್ಲೆಯ ಪ್ರಮುಖ ಅಂತರರಾಷ್ಟ್ರೀಯ ಪ್ರವಾಸಿ ತಾಣಗಳಾಗಿ ಮತ್ತಷ್ಟು ಬೆಳೆ ಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಶಿಥಿಲಗೊಂಡ ಸೇತುವೆ: ಪಡುಬಿದ್ರಿಯಿಂದ ಬೀಚ್ ಸಂಪರ್ಕಿಸುವ ರಸ್ತೆಯಲ್ಲಿರುವ ಸುಮಾರು 50 ವರ್ಷಗಳ ಹಳೆಯ ಸೇತುವೆ ಶಿಥಿಲಗೊಂಡಿದ್ದು, ಕುಸಿತದ ಭೀತಿ ಎದುರಿಸುತ್ತಿದೆ.

ಈ ಸೇತುವೆಯ ಮೇಲ್ಭಾಗದಲ್ಲಿ ಕಾಂಕ್ರೀಟ್ ಕಿತ್ತು ಹೋಗಿರುವುದಲ್ಲದೆ, ಅಡಿಭಾಗದ ಬುಡವೂ ಅಪಾಯಕರ ಸ್ಥಿತಿಯಲ್ಲಿದೆ. ನದಿಯ ಹರಿವಿನ ರಭಸದಿಂದ ಕಾಂಕ್ರೀಟ್ ಪಿಲ್ಲರ್ಗಳಿಗೆ ಹಾನಿಯಾಗಿದ್ದು, ಸೇತುವೆಯ ಸ್ಥಿರತೆ ಕುಂದಿದೆ. ಇದರಿಂದ ಲಘು ವಾಹನಗಳು ಸೇರಿದಂತೆ ಭಾರವಾದ ವಾಹನಗಳ ಸಂಚಾರವೂ ಅಪಾಯಕರವಾಗಿದೆ. ಸೇತುವೆ ಕಿರಿದಾಗಿರುವುದರಿಂದ, ಶನಿವಾರ ಮತ್ತು ಭಾನುವಾರ ಬೀಚ್ಗೆ ವಾಹನ ದಟ್ಟಣೆ ಹೆಚ್ಚಾದಾಗ ಸಂಚಾರದಲ್ಲಿ ತೊಂದರೆ ಉಂಟಾಗುತ್ತದೆ. ದಟ್ಟಣೆ ಹೆಚ್ಚಾದ ಸಂದರ್ಭಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಅನಿವಾರ್ಯವಾಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-28-280124019

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.