ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡುಬಿದ್ರಿ: ವಿಷ್ಣು ಸಹಸ್ರನಾಮ ಜಪ, ಹೋಮ ಸಂಪನ್ನ

Published 7 ಆಗಸ್ಟ್ 2023, 13:42 IST
Last Updated 7 ಆಗಸ್ಟ್ 2023, 13:42 IST
ಅಕ್ಷರ ಗಾತ್ರ

ಪಡುಬಿದ್ರಿ: ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನವಶಕ್ತಿ ಭಜನ ಮಂಡಳಿ ವತಿಯಿಂದ ವೇಣೂರು ಶಶಾಂಕ ಭಟ್ ಹಾಗೂ ಇತರ ಋತ್ವಿಜರ ಸಹಯೋಗದಲ್ಲಿ ಅಧಿಕ ಶ್ರಾವಣ ಫಲಪ್ರಾಪ್ತಿಗಾಗಿ ವಿಷ್ಣು ಸಹಸ್ರನಾಮ ಹೋಮದ ಪೂಣಾಹುತಿ ನಡೆಯಿತು.

ಮಧ್ವನಗರದ ತರಂಗಿಣಿ ಮಿತ್ರ ಮಂಡಳಿ ಸದಸ್ಯರಿಂದ ವಿಷ್ಣು ಸಹಸ್ರನಾಮಾವಳಿ ಜಪ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೆಜಮಾಡಿ ಶ್ರೀಹರಿ ಭಟ್, ಅಧಿಕ ಶ್ರಾವಣ ಮಾಸ ವಿಶೇಷ ಪೂಜೆ, ಹವನಗಳಿಗೆ ವಿಶೇಷ ಮಹತ್ವವಿದ್ದು, ಅದರಲ್ಲೂ ವಿಷ್ಣು ಸಹಸ್ರನಾಮ ಜಪ, ಹೋಮಗಳಿಂದ ಭಗವಂತನ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.

ದೇವಸ್ಥಾನದ ಅನುವಂಶಿಕ ಮೊಕ್ತೇಸರ ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳ, ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಅರ್ಚಕ ಪದ್ಮನಾಭ ಭಟ್, ನವಶಕ್ತಿ ಭಜನ ಮಂಡಳಿ ಅಧ್ಯಕ್ಷೆ ಸುಧಾ ರಾಘವೇಂದ್ರ ನಾವಡ, ರಾಘವೇಂದ್ರ ನಾವಡ, ಕಾರ್ಯದರ್ಶಿ ಕಸ್ತೂರಿ ರಾಮಚಂದ್ರ, ತರಂಗಿಣಿ ಮಿತ್ರ ಮಂಡಳಿ ಅಧ್ಯಕ್ಷ ರಮಾಕಾಂತ ರಾವ್, ಗೌರವಾಧ್ಯಕ್ಷ ಬಾಲಪ್ಪ ರಾಮಚಂದ್ರ ರಾವ್, ನವಶಕ್ತಿ ಭಜನ ಮಂಡಳಿಯ ಸದಸ್ಯೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT