ಪಡುಬಿದ್ರಿ: ಸಮಗ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಎರಡನೇ ದಿನವಾದ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಗುರುವಾರ ಸಂಜೆ ತಂತ್ರಿಗಳಾದ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಹಾಗೂ ಇತರರನ್ನು ಸ್ವಾಗತಿಸಲಾಯಿತು. ರಾಧಾಕೃಷ್ಣ ಉಪಾಧ್ಯಾಯ ಅವರು ಬಾಲಾಲಯದಲ್ಲಿ ಅರ್ಚಕರಾದ ವೈ. ಗುರುರಾಜ ಭಟ್ ಮತ್ತು ಎಚ್. ಪದ್ಮನಾಭ ಭಟ್ ಉಪಸ್ಥಿತಿಯಲ್ಲಿ ನೆರವೇರಿಸಿದ ದೇವತಾ ಪ್ರಾರ್ಥನೆ ಬಳಿಕ ತೋರಣ ಮುಹೂರ್ತ ಮತ್ತು ಉಗ್ರಾಣ ಮುಹೂರ್ತ ನಡೆಸಲಾಯಿತು.

ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಪಾದರು ಸಂಸ್ಥಾನ ಪೂಜೆ ನಡೆಸಿ ಆಶೀರ್ವಚನ ನೀಡಿದರು. ಬೆಳಿಗ್ಗೆ ಅಷ್ಟೋತ್ತರ ನಾರಿಕೇಳ ಗಣಯಾಗ, ಮಹಾರುದ್ರಯಾಗ, ಪೂರ್ಣ ನವಗ್ರಹ ಯಾಗ, ಪೂರ್ಣ ಮೃತ್ಯುಂಜಯ ಯಾಗ, ವಿಜಯಗಣಪತಿ ಯಾಗ ನಡೆದವು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪೂರ್ಣಮಾನ ಅಘೋರಾಸ್ತ ಯಾಗ, ಭೂವರಾಹ ಯಾಗ, ದುರ್ಗಾರಾಧನೆ, ನೂತನ ನಾಗಸಾನ್ನಿಧ್ಯದಲ್ಲಿ ವಾಸ್ತುರಾಕ್ಷೋಘ್ನ ಯಾಗ, ಬಿಂಬಶುದ್ಧಿ, ಬಿಂದಿವಾಸ ನಡೆಯಿತು.

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ದೇವಳದ ಆನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳ್, ಪಡುಬಿದ್ರಿ ಪೇಟೆಮನೆ ಭವಾನಿಶಂಕರ್ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಪುಣೆ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲುಬೆಟ್ಟು, ಗಣಪತಿ ಪ್ರೌಢಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ಚಂದ್ರ ಜೆ.ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಮುರಳೀನಾಥ್ ಶೆಟ್ಟಿ ಉಪಸ್ಥಿತರಿದ್ದರು.

ಶುಕ್ರವಾರ ಸಾನ್ವಿ ರಾವ್, ನವಶಕ್ತಿ ವಿಮೆನ್ಸ್ ವೆಲ್ಫೇರ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ಮಣಿಪಾಲ ಮಾಹೆಯ ವಿದ್ಯಾಸುದರ್ಶನ್, ಹರ್ಷಿನಿ ಸಾಲ್ಯಾನ್ ಅವರಿಂದ ನೃತ್ಯ, ರಿಷಿ ರಾವ್ ಪೇಜಾವರ ಶಾಸ್ತ್ರೀಯ ಸಂಗೀತ, ಶ್ರೀಪತಿ ಉಪಾಧ್ಯಾಯ ಕುಂಭಾಶಿ ಮತ್ತು ಅಲಂಕಾರ ಗಣಪತಿ ಭಟ್ ಯಲ್ಲಾಪುರ ಅವರಿಂದ ಗಾನ ಆಖ್ಯಾನ ನಡೆಯಿತು.

ಶೋಭಾಯಾತ್ರೆ: ವನದುರ್ಗಾ ಟ್ರಸ್ಟ್ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಆಡಳಿತ ಮಂಡಳಿಯ ವತಿಯಿಂದ ಅಂದಾಜು ₹1.20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ವರ್ಣ ಪಲ್ಲಕ್ಕಿ ಹಾಗೂ ಮಹಾಗಣಪತಿ ದೇವರ ಗರ್ಭಗುಡಿಯ ಬಾಗಿಲಿಗೆ ಬೆಳ್ಳಿಯ ಹೊದಿಕೆ ಸಮರ್ಪಣೆಯ ಶೋಭಾಯಾತ್ರೆಯು ಏ.25ರಂದು ಸಂಜೆ 3.30ಕ್ಕೆ ನಡೆಯಲಿದೆ.

ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಚಾಲನೆ ದೊರೆಯಲಿದೆ. ಶೋಭಾಯಾತ್ರೆಯು ಭಜನಾ ತಂಡ, ಚೆಂಡೆ ವಾದನದೊಂದಿಗೆ ಬ್ರಹ್ಮಸ್ಥಾನ ಮಾರ್ಗವಾಗಿ ಪೇಟೆಯ ಮೂಲಕ ಪಡುಬಿದ್ರಿ ದೇವಳಕ್ಕೆ ತಲುಪಲಿದೆ. ಶೋಭಾಯಾತ್ರೆಯ ಬಳಿಕ ಪಲಿಮಾರು ಮಠದ ಹಿರಿಯ ಯತಿ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-28-1506329568

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.