ಪಡುಬಿದ್ರಿ: ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ನಾಲ್ಕನೇ ದಿನವಾದ ಭಾನುವಾರ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಸಂಸ್ಥಾಪನಾ ಪೂಜೆ ನೆರವೇರಿಸಿದರು.

ಬೆಳಿಗ್ಗೆಯಿಂದ ಅಷ್ಟೋತ್ತರಶತ ನಾರಿಕೇಳ ಗಣಯಾಗ, ಮಹಾರುದ್ರ ಯಾಗ, ದುರ್ಗಾ ಯಾಗ, ನಾಗಸಾನ್ನಿಧ್ಯದಲ್ಲಿ ನಾಗಬ್ರಹ್ಮಾದಿ ಶಕ್ತಿಗಳ ಪ್ರತಿಷ್ಠಾ ಯಾಗ, ತಿಲ, ಕೂಷ್ಠಾಂಡ ಪವಮಾನ, ಸರ್ಪತ್ರಯ ಮಂತ್ರ ಯಾಗ, ಸರ್ಪ ಗಾಯತ್ರಿ ಯಾಗ, ನಾಗಬ್ರಹ್ಮಾದಿಗಳ ಪ್ರತಿಷ್ಠೆ, ನವಕ ಪ್ರಧಾನ ಆಶ್ಲೇಷ ಬಲಿ, ಅಭಿಷೇಕ, ಪ್ರಸನ್ನ ಪೂಜೆ, ಸಂಜೆ ದುರ್ಗಾರಾಧನೆ, ನವದುರ್ಗಾ ಯಾಗ, ಮಹಾಸುದರ್ಶನ ಯಾಗ ನಡೆದವು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡರು.

ಸಾಂಸ್ಕೃತಿಕ ಕಾರ್ಯಕ್ರಮ: ವರವೀಣಾ ವೃಂದ ಪಾದೆಬೆಟ್ಟು ತಂಡದಿಂದ ವೀಣಾ ವಾದನ, ವಾಣಿ ಸತೀಶ್ ರಾವ್ ಎಲ್ಲೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾಜೇಶ್ವರಿ ಸಿಲ್ಕ್ಸ್ ಪ್ರಾಯೋಜಕತ್ವದಲ್ಲಿ ಶ್ರೀಚಕ್ರ ನೃತ್ಯ ಅಕಾಡೆಮಿ ಎರ್ಮಾಳು ಅವರಿಂದ ಭರತನಾಟ್ಯ, ಪಡುಬಿದ್ರಿ ಬಂಟರ ಸಂಘ, ಬಂಟರ ವೆಲ್ಫೇರ್ ಸೊಸೈಟಿ ಪ್ರಾಯೋಜಕತ್ವದಲ್ಲಿ ನಂದಗೋಕುಲ ಮಂಗಳೂರು ತಂಡದಿಂದ ಸಾಂಸ್ಕೃತಿಕ ವೈಭವ ನಡೆದವು.

ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ, ‘ಜೀರ್ಣೋದ್ಧಾರಗೊಂಡಿರುವ ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಭಕ್ತರ ಮನ ಸೆಳೆಯುತ್ತಿದೆ. ದೇಗುಲವು ಮಕ್ಕಳಲ್ಲಿ ಆತ್ಮಶಕ್ತಿ, ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಕೇಂದ್ರವಾಗಲಿ’ ಎಂದು ಹೇಳಿದರು.

ಗಣೇಶ್ ನಾರಾಯಣ್ ಹೆಗ್ಡೆ, ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ವೆಂಕಟೇಶ ಅಡಿಗ ಮಾತನಾಡಿದರು. ದಾನಿಗಳಾದ ಕೆ.ಕೆ. ಶೆಟ್ಟಿ ಮುಂಬೈ, ಕರುಣಾಕರ ಶೆಟ್ಟಿ ಮುಂಬೈ, ಮಠತ್ರಾಮ ಗಂಗಾಧರ ರಾವ್ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಬ್ರಾಹ್ಮಣ ಯುವ ಪರಿಷತ್ ಅಧ್ಯಕ್ಷ ರಘುಪತಿ ರಾವ್, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಸಾಗರ ಬಂಟ್ಸ್ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ, ಉದ್ಯಮಿ ಪೂನ ಸಂತೋಷ್ ಶೆಟ್ಟಿ ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ದೇವಾಡಿಗ ವಂದಿಸಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿದರು.

ಇಂದಿನ ಕಾರ್ಯಕ್ರಮ: ಸೋಮವಾರ (ಏ. 27) ಲಕ್ಷ ರುದ್ರ ಗಾಯತ್ರಿ, ಲಕ್ಷ ಗಣಪತಿ ಗಾಯತ್ರಿ ಜಪ ನಡೆಯಲಿದೆ. ಬೆಳಿಗ್ಗೆ ಸಂಗೀತ ಕಾರ್ಯಕ್ರಮ, ಸಂಜೆ ಭರತನಾಟ್ಯ, ಬಳಿಕ ಯಕ್ಷಗಾನ ಏಕಪಾತ್ರಾಭಿನಯ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ದೀಪಪ್ರಜ್ವಲನೆ ಮಾಡುವರು. ಒಡಿಯೂರು ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡುವರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-28-786594114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.