ಪಡುಬಿದ್ರಿ: ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ.

ಪಾರಂಪರಿಕ, ಆಧುನಿಕ ಶೈಲಿಗಳ ಸಂಯೋಜನೆಯೊಂದಿಗೆ ನಿರ್ಮಾಣಗೊಂಡಿರುವ ದೇವಳದಲ್ಲಿ ಶಿಲಾ ಶಿಲ್ಪ, ದಾರುಶಿಲ್ಪಗಳ ಸಮನ್ವಯ ವಿಶೇಷವಾಗಿದ್ದು, ಸೌಂದರ್ಯವನ್ನು ಹೆಚ್ಚಿಸಿದೆ. ಗೋಪುರ, ಮಂಟಪಗಳು, ಕಂಬಗಳ ಅಲಂಕಾರ ಕಣ್ಮನಗಳಿಗೆ ಹಬ್ಬದ ಅನುಭವ ನೀಡುತ್ತಿದೆ.

ರಾಜಗೋಪುರವು ದ್ವಿತಲ ರಚನೆಯಾಗಿದ್ದು, ಒಳ– ಹೊರ ಭಾಗಗಳಲ್ಲಿ ಕಂಬಗಳ ಸುಂದರ ವಿನ್ಯಾಸವಿದೆ. ಮಂಟಪದ ಕಂಬಗಳಲ್ಲಿ ಹೊಯ್ಸಳ, ಚಾಲುಕ್ಯ ಶೈಲಿಯ ಶಿಲ್ಪಕಲೆ ಅಳವಡಿಸಲಾಗಿದ್ದು, ಪುರಾತನ ಶೈಲಿಯ ನಕ್ಷೆಯನ್ನು ಉಳಿಸಿಕೊಂಡು ನವೀನ ರೂಪ ನೀಡಲಾಗಿದೆ.

ಅಗ್ರಸಭೆ, ಸುತ್ತುಪೌಳಿಯ ಭಾಗಗಳಲ್ಲಿ ಹೊಯ್ಸಳ ಶೈಲಿಯ ಕಂಬಗಳು ಅಳವಡಿಸಲ್ಪಟ್ಟಿದ್ದು, ಪ್ರದಕ್ಷಿಣೆ ಮಾಡುವಾಗ ಈ ಶಿಲ್ಪಕಲೆ ವಿಶೇಷ ಅನುಭವ ನೀಡುತ್ತದೆ. ಗರ್ಭಗುಡಿ ದ್ವಿತಲ ವಿನ್ಯಾಸದಲ್ಲಿ ನಿರ್ಮಾಣಗೊಂಡಿದ್ದು, ಸಂಪ್ರದಾಯಬದ್ಧ ಶಿಲ್ಪಶಾಸ್ತ್ರದ ನಿಯಮಗಳನ್ನು ಪಾಲಿಸಲಾಗಿದೆ. ತೀರ್ಥಮಂಟಪ, ಮುಖಮಂಟಪ, ವಸಂತಮಂಟಪ ಸೇರಿದಂತೆ ವಿವಿಧ ಭಾಗಗಳಲ್ಲಿ ವಿಭಿನ್ನ ಶೈಲಿಗಳ ಸಂಯೋಜನೆಯಿದೆ. ಒಟ್ಟಾರೆ 64 ಕಂಬಗಳೊಂದಿಗೆ ದೇವಸ್ಥಾನವು ಶಿಲ್ಪಕಲೆಯ ಅದ್ಭುತ ಮಾದರಿಯಾಗಿದೆ.

ದೇವಾಲಯದ ಸುತ್ತಮುತ್ತಲಿನ ಶಿಲ್ಪ, ಅಲಂಕಾರಗಳು ಭಕ್ತರಲ್ಲಿ ಭಕ್ತಿ ಹೆಚ್ಚಿಸಿ ದೇವರ ದರ್ಶನದಲ್ಲಿ ತಲ್ಲೀನತೆ ಉಂಟುಮಾಡುವಂತಿವೆ. ಈ ನವೀಕರಣ ಕಾರ್ಯವು ದೇವಾಲಯದ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-29-1103461163

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.