ಪಡುಬಿದ್ರಿ: ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳಿಂದ ಜನರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಕಾರ್ಯೋನ್ಮುಖರಾಗಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಕಚೇರಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರ ಹಾಗೂ ಕಾಳಜಿ ಕೇಂದ್ರವನ್ನು ಸ್ಥಾಪಿಸಬೇಕು. ಸಮಸ್ಯೆಗಳು ಚರ್ಚೆಗೆ ಸೀಮಿತವಾಗದೆ ಜವಾಬ್ದಾರಿಯುತವಾಗಿ ಪರಿಹಾರ ಕಂಡು ಅನುಷ್ಠಾನ ಗೊಳ್ಳುವಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಕಂದಾಯ, ಮೆಸ್ಕಾಂ, ಅರಣ್ಯ ಇಲಾಖೆ, ಹೆದ್ದಾರಿ, ಲೋಕೋಪಯೋಗಿ, ಶಿಕ್ಷಣ ಹಾಗೂ ಕೃಷಿ ಇಲಾಖೆಗಳ ಅಧಿಕಾರಿಗಳು ಸಮನ್ವಯ ದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಹಳೆ ಜಲಮೂಲಗಳ ನಿರ್ವಹಿಸಿ: ಹೊಸ ಯೋಜನೆ ಕಾರ್ಯಗತವಾಗುತ್ತಿರುವ ಸಂದರ್ಭದಲ್ಲಿ ಹಳೆಯ ಜಲಮೂಲ ಗಳನ್ನು ನಿರ್ವಹಣೆ ಮಾಡಬೇಕು. ಅವುಗಳ ಸಂಪರ್ಕ ಕಡಿತಗೊಳಿಸದೆ ಗ್ರಾಮಾಂತರ ಪ್ರದೇಶಗಳಿಗೆ ನಿರಂತರ ವಾಗಿ ನೀರು ಪೂರೈಕೆ ಮಾಡುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕುರ್ಕಾಲು ಅಣೆಕಟ್ಟೆಯಿಂದ ಕಾಪು ಪುರಸಭೆ ಹಾಗೂ ಏಳು ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಯೋಜನೆ ವಿಫಲಗೊಂಡಿದ್ದು, ಲಭ್ಯವಿರುವ ನೀರಿನ ಪ್ರಮಾಣದಲ್ಲಿ ಕುರ್ಕಾಲು ಗ್ರಾಮವನ್ನು ಸೇರಿಸಿ ಪುರಸಭೆಗೆ ಮಾತ್ರ ನೀರು ಪೂರೈಸಲು ಸಾಧ್ಯವಾಗಿದೆ. ಅಣೆಕಟ್ಟೆಯಿಂದ ಇತರ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಸ್ವರೂಪವನ್ನು ಬದಲಾಯಿಸಿ, ವಾರಾಹಿ ಯೋಜನೆಯಡಿ ಸಂಪರ್ಕಿಸುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ನೀರು ಪೂರೈಕೆ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ವರ್ಷ ವಾರಾಹಿ ಯೋಜನೆಯ ನೀರು ಸಂಪರ್ಕವಾಗುವ ವಿಶ್ವಾಸವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಗೆ ಅಭಿನಂದನೆ: ಈ ಬಾರಿಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಜಿಲ್ಲೆಯು ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿರುವುದಕ್ಕೆ ಶಿಕ್ಷಣ ಇಲಾಖೆಯನ್ನು ಸುರೇಶ್ ಶೆಟ್ಟಿ ಅಭಿನಂದಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಅವರು ಪಡುಬಿದ್ರಿ ಕೆಪಿಎಸ್ ಶಾಲೆಯಲ್ಲಿ ಕೊಠಡಿಗಳ ಅಗತ್ಯದ ಬಗ್ಗೆ ಗಮನಕ್ಕೆ ತಂದರು. ನಾಮ ನಿರ್ದೇಶಿತ ಸದಸ್ಯ ವೈ.ಸುಕುಮಾರ್ ಅವರು, ಶಾಲಾ ಕಟ್ಟಡ ನಿರ್ಮಾಣದ ವೇಳೆ ಜಾಗದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ರೀತಿಯಲ್ಲಿ ಯೋಜನೆ ರೂಪಿಸಿ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಅಂತರ್ಜಲ ಮಟ್ಟ ಏರಿಕೆಗೆ ಕೈಜೋಡಿಸಿ: ಶ್ರಮದಾನದ ಮೂಲಕ ಗ್ರಾಮಗಳಲ್ಲಿಯೇ ಬಾವಿ, ಕೆರೆಗಳನ್ನು ತುಂಬಿಸುವ ಕಾರ್ಯಗಳಿಗೆ ಉತ್ತೇಜನ ನೀಡಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೈಜೋಡಿಸಬೇಕು. ಸಣ್ಣ ನೀರಾವರಿ ಇಲಾಖೆ ಈ ಬಾರಿ ಅಣೆಕಟ್ಟೆ ಹಾಗೂ ಕಿಂಡಿ ಅಣೆಕಟ್ಟೆಗಳ ನಿರ್ವಹಣೆಯಲ್ಲಿ ಎಡವಿದ್ದು, ನೀರಿನ ಸಮಸ್ಯೆ ಉಂಟಾಗಿದೆ. ಮುಂದಿನ ಡಿಸೆಂಬರ್ನೊಳಗೆ ಅಣೆಕಟ್ಟೆಗಳಿಗೆ ಶೇ 70ರಷ್ಟು ಗೇಟ್ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ವಿದ್ಯಾವಂತರನ್ನು ಕೃಷಿಯತ್ತ ಆಕರ್ಷಿಸಿ: ಆದಾಯ ಆಧಾರಿತ ಬೆಳೆಗಳತ್ತ ರೈತರನ್ನು, ವಿದ್ಯಾವಂತರನ್ನು ಆಕರ್ಷಿಸಲು ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪ್ರಯತ್ನ ಮಾಡಬೇಕು. ಮಣ್ಣಿನ ಗುಣ ಮಟ್ಟಕ್ಕೆ ಅನುಗುಣವಾಗಿ ಸೂಕ್ತ ಬೆಳೆಗಳನ್ನು ಬೆಳೆಯಲು ರೈತರಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ಸೂಚಿಸಿದರು.

ಕಾಪು ತಾಲ್ಲೂಕು ಕೃಷಿ ಕೇಂದ್ರದ ಮೂಲಕ ಮುಂಗಾರು ಹಂಗಾಮಿಗೆ 300 ಕ್ವಿಂಟಲ್ ಭತ್ತ ಬಿತ್ತನೆ ಬೀಜಕ್ಕೆ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ರೈತಕೇಂದ್ರ ದಲ್ಲಿ ಈಗಾಗಲೇ 130 ಕ್ವಿಂಟಲ್ ಬೀಜ ಲಭ್ಯವಿದ್ದು, ವಿತರಣೆ ಮಾಡಲಾಗುತ್ತಿದೆ. ಕಳೆದ 30 ವರ್ಷಗಳಿಂದ ಕರಾವಳಿ ಭಾಗದಲ್ಲಿ ಎಂಒ4 ಭತ್ತದ ತಳಿಯನ್ನು ಬೆಳೆಯಲಾಗುತ್ತಿದ್ದು, ಇದೀಗ ಇಳುವರಿ ಕಡಿಮೆಗೊಳ್ಳುತ್ತಿದೆ. ಆದರೆ ರೈತರಿಂದ ಆ ತಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದರು.

1 ಸಾವಿರ ಟನ್ ರಸಗೊಬ್ಬರಕ್ಕೆ ಬೇಡಿಕೆ: ಸಹ್ಯಾದ್ರಿ ಕೆಂಪು ಬ್ರಹ್ಮ, ಸಹ್ಯಾದ್ರಿ ಪಂಚಮುಖಿ ತಳಿಗಳನ್ನು ಪ್ರಾಯೋಗಿ ಕವಾಗಿ ಬೆಳೆಯಲು ಕ್ರಮವಹಿಸಲಾಗಿದೆ. ರಾಸಾಯನಿಕ ಗೊಬ್ಬರ 126 ಟನ್ ದಾಸ್ತಾನು ಇದೆ. 1 ಸಾವಿರ ಟನ್ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. 10 ಸೊಸೈಟಿ ಹಾಗೂ 5 ಖಾಸಗಿ ಮಳಿಗೆಗಳಿಂದ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರ ಕಳ್ಳಸಾಗಾಣಿಕೆಯಾಗುತ್ತಿರುವ ಬಗ್ಗೆ ನಿಗಾ ವಹಿಸಿ ಪೊಲೀಸರ ಸಹಕಾರದಿಂದ ಜಪ್ತಿ ಮಾಡಲು ಕ್ರಮ ವಹಿಸುವಂತೆ ತಾಕೀತು ಮಾಡಿದರು.

ತಹಶೀಲ್ದಾರ್ ಅನಂತಶೇಕರ ಬಿ., ತಾಪಂ ಆಡಳಿತಾಧಿಕಾರಿ ಪೂರ್ಣಿಮಾ, ಇಒ ವಿಜಯಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ವೈ.ಸುಕುಮಾರ್, ಯು.ಸಿ.ಶೇಖಬ್ಬ, ಪ್ರಭಾ ಬಿ.ಶೆಟ್ಟಿ, ರಾಜೇಶ್ ಕುಲಾಲ್, ಜಿತೇಂದ್ರ ಪುರ್ಟಾಡೋ, ರಮೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-28-2001136001

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.