ಪಡುಬಿದ್ರಿ: ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಹಾಗೂ ಇತಿಹಾಸ ಪ್ರಸಿದ್ಧ ಚೆಂಡು ಸಂಭ್ರಮದಿಂದ ಸಂಪನ್ನಗೊಂಡಿತು.

ಸಮಗ್ರ ಜೀರ್ಣೋದ್ಧಾರಗೊಂಡು ಇತ್ತೀಚೆಗೆ ಬ್ರಹ್ಮಕಲಶೋತ್ಸವ ನೆರವೇರಿದ ಬಳಿಕ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದರು. ಮಂಗಳವಾರ ರಾತ್ರಿ ರಥಾರೋಹಣ ನಡೆಯಿತು.

ಕ್ಷೇತ್ರದ ತಂತ್ರಿ ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ದೇವರಿಗೆ ಉತ್ಸವಕಾಲದ ವಿಶೇಷ ಪೂಜೆ, ನಿತ್ಯಬಲಿ, ಮಹಾಪೂಜೆ ಹಾಗೂ ಪಲ್ಲಪೂಜೆಗಳು ನೆರವೇರಿದವು. ಬಳಿಕ ರಥಶುದ್ಧಿ ಮತ್ತು ಉತ್ಸವಬಲಿ ನಡೆಯಿತು. ಉತ್ಸವದ ಅಂಗವಾಗಿ ದೇವಸ್ಥಾನ ಹಾಗೂ ದೇವರನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ರಾತ್ರಿ ಮಹಾರಥೋತ್ಸವ ನಡೆಯಿತು.

ದೇಗುಲದ ಆನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸ್, ಭವಾನಿಶಂಕರ ಹೆಗ್ಡೆ, ಶ್ರೀಪತಿ ರಾವ್ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ ಇದ್ದರು.

ಜಾತ್ರಾ ಮಹೋತ್ಸವದ ಮರುದಿನ ನಡೆಯುವ ಪಡುಬಿದ್ರಿ ಚೆಂಡಿಗೆ ಬುಧವಾರ ಸಂಜೆ ಚಾಲನೆ ನೀಡಲಾಯಿತು. ದೇವಳದ ಅರ್ಚಕ ಪದ್ಮನಾಭ ಭಟ್ ಪೂಜೆ ಸಲ್ಲಿಸಿದರು. ಬಳಿಕ ಚೆಂಡಿನ ಸೇವಾಕರ್ತರಾದ ಬೇಬಿ ಪೂಜಾರ್ತಿ ಮನೆಯವರು ಚೆಂಡನ್ನು ನಡ್ಸಾಲು ಗುತ್ತಿನ ಶ್ರೀನಾಥ ಹೆಗ್ಡೆ ಮತ್ತು ಬಗ್ಗೇಡಿ ಗುತ್ತಿನ ಶೇಖರ ಶೆಟ್ಟಿ ಸಮ್ಮುಖದಲ್ಲಿ ಹಸ್ತಾಂತರಿಸಿದರು. ಪಾದೆಬೆಟ್ಟು ಹಾಗೂ ನಡ್ಸಾಲು ಯುವಕರು ದೇವಳದ ಮುಂಭಾಗದಲ್ಲಿ ಚೆಂಡು ಆಡುವ ಮೂಲಕ ಪಾರಂಪರಿಕ ಕ್ರೀಡೆಯನ್ನು ಸಂಭ್ರಮದಿಂದ ನಡೆಸಿದರು. ಪ್ರತಿವರ್ಷ ಪಾರಂಪರಿಕ ಚೆಂಡು ನಡೆಯುತ್ತದೆ.

ರಥೋತ್ಸವದ ಅಂಗವಾಗಿ ತರಂಗಿಣಿ ಮಿತ್ರ ಮಂಡಳಿ ವತಿಯಿಂದ ನಡೆದ ಪುಷ್ಪಾಲಂಕಾರ ಭಕ್ತರ ಗಮನ ಸೆಳೆಯಿತು. ರಾಮಚಂದ್ರ ರಾವ್ ನೇತೃತ್ವದಲ್ಲಿ 32ನೇ ವರ್ಷದ ಪುಷ್ಪಾಲಂಕಾರ ಮಾಡಲಾಗಿತ್ತು. ಮಂಡಳಿ ಅಧ್ಯಕ್ಷ ರಮಾಕಾಂತ್ ರಾವ್, ಕಾರ್ಯದರ್ಶಿ ಗಣೇಶ್ ರಾವ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-28-1819133778

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.