ಪಡುಬಿದ್ರಿ: ಭಕ್ತರ ಸಂಘಟಿತ ಪ್ರಯತ್ನದಿಂದ ಪಡುಬಿದ್ರಿಯ ದೇಗುಲ ನಿರ್ಮಾಣವಾಗಿದೆ. ಮುಂದೆ ಉತ್ತಮ ಸಮಾಜ ನಿರ್ಮಾಣದ ಕಾರ್ಯಕ್ಕೂ ದೇವಸ್ಥಾನದಿಂದ ಪ್ರೇರಣೆ ಸಿಗಲಿ ಎಂದು ಅದಮಾರು ಕಿರಿಯ ಯತಿ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಭಾನುವಾರ ಸೂರ್ಯಾಸ್ತಮಾನ ಕಾಲದಲ್ಲಿ ಮಹಾಲಿಂಗೇಶ್ವರ ದೇವರ ಸನ್ನಿಧಿಯ ದೀಪಾರಾಧನೆ ಹಾಗೂ ಎರಡು ವರ್ಷಗಳಿಂದ ಪಡುಬಿದ್ರಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆ, ಶಿವಪಂಚಾಕ್ಷರಿ ಜಪ, ರುದ್ರ ಪಾರಾಯಣಗಳ ದೇವತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದ್ರಿಯಗಳಿಗೆ ಮನಸ್ಸು ಯಜಮಾನ. ಮನಸ್ಸು ಪ್ರಶಾಂತವಾಗಿದ್ದಲ್ಲಿ ಎಲ್ಲವನ್ನೂ ಜಯಿಸಬಹುದು. ಪಡುಬಿದ್ರಿ ದೇಗುಲದಲ್ಲಿ 736 ದಿನಗಳ ಕಾಲ ನಡೆದ ಭಜನೆ, ಶಿವಪಂಚಾಕ್ಷರಿ ಜಪ, ರುದ್ರ ಪಾರಾಯಣಗಳಿಂದ ಆಗಿರುವ ಬದಲಾವಣೆ ಗಮನಿಸಿದ್ದೇವೆ ಎಂದರು.

ಆನುವಂಶಿಕ ಮೊಕ್ತೇಸರ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ಮುರಳೀನಾಥ ಶೆಟ್ಟಿ, ರಾಜೇಂದ್ರ ಶೆಣೈ, ಯಾದವೇಂದ್ರ ಉಪಾಧ್ಯಾಯ, ಪ್ರಕಾಶ ದೇವಾಡಿಗ, ರಾಧಾಕೃಷ್ಣ ಆಚಾರ್ ಇದ್ದರು.

ಸಹಾಯಕ ಅರ್ಚಕ ಅಚ್ಚಡ ಶ್ರೀನಿವಾಸ ಆಚಾರ್ಯ ಅವರನ್ನು ಅದಮಾರು ಶ್ರೀಗಳು ಸನ್ಮಾನಿಸಿದರು. ಕಸ್ತೂರಿ ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಮಾಕಾಂತ ರಾವ್ ವಂದಿಸಿದರು. ಕಲಾವಿದೆ ಮಂಜೇಶ್ವರದ ಶಾಂತೇರಿ ಲಿಖಿತ್ ಪ್ರಭು ಭಜನೆ ನಡೆಸಿಕೊಟ್ಟರು.

ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಮಹೋತ್ಸವವು ಭಕ್ತಿಭಾವ ಹಾಗೂ ವೈಭವದಿಂದ ಯಶಸ್ವಿಯಾಗಿ ನೆರವೇರಿದ್ದು, ನಮನ ಸಲ್ಲಿಸುವ ಸಂಕಲ್ಪ - ಸಂಪನ್ನ - ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯನ್ನು ದೇಗುಲದ ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಹಾಗೂ ಕೊರ್ನಾಯ ಶ್ರೀಪತಿ ರಾವ್ ನೆರವೇರಿಸಿದರು.

ವಿವಿಧ ಭಜನಾ ಮಂಡಳಿಗಳಿಂದ ಭಜನೆ ಸೇವೆ ನಡೆಯಿತು. ದೇವಸ್ಥಾನದ ಅರ್ಚಕರಾದ ವೈ. ಗುರುರಾಜ ಭಟ್, ಎಚ್. ಪದ್ಮನಾಭ ಭಟ್, ಜೀಣೋದ್ಧಾರ ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಸಚರಿತಾ ಅಂಚನ್, ಪ್ರಕಾಶ್ ದೇವಾಡಿಗ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಮುರಳಿನಾಥ ಶೆಟ್ಟಿ, ಎನ್.ಟಿ. ಅಂಚನ್, ವೈ. ಸುರೇಶ್ ರಾವ್, ನಟರಾಜ ರಾವ್ ಪಿ.ಎಸ್., ರಮಾಕಾಂತ ರಾವ್, ಮಾತೃಮಂಡಳಿಯ ಸುಧಾ ಆರ್. ನಾವಡ, ಕಸ್ತೂರಿ ರಾಮಚಂದ ಇದ್ದರು. ಶ್ರೀಧರ ಆಚಾರ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-28-353060584

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.