ಪಡುಬಿದ್ರಿ: ಡಾಸ್ಕ್ ಟು ಡಾನ್ ಧ್ಯೇಯವಾಕ್ಯದೊಂದಿಗೆ ಪಡುಬಿದ್ರಿ ಮುಖ್ಯ ಬೀಚ್ ರಸ್ತೆಯಿಂದ ಮಲ್ಪೆವರೆಗೆ ಅಲ್ಟ್ರಾ ಮ್ಯಾರಥಾನ್ ಓಟದ ಸ್ಪರ್ಧೆ ಏ.4ರಂದು ಸಂಜೆ ಪಡುಬಿದ್ರಿ ಮುಖ್ಯ ಬೀಚ್ನಲ್ಲಿ ಆರಂಭಗೊಳ್ಳಲಿದೆ ಎಂದು ಸಿಎ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಡುಬಿದ್ರಿ ವ್ಯವಸಾಯಿಕ ಸೊಸೈಟಿಯ ಸಹಯೋಗದಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮೊದಲ ಬಾರಿ ಈ ಸ್ಪರ್ಧೆ ನಡೆಯಲಿದ್ದು, 3 ಕಿಮೀ, 5 ಕಿಮೀ, 10 ಕಿಮೀ, 21 ಕಿಮೀ, 50 ಕಿಮೀ ಮತ್ತು 12 ತಾಸುಗಳ ಓಟ ಕಡಲ ಕಿನಾರೆಯಲ್ಲಿ ನಡೆಯಲಿದೆ ಎಂದು ಹೇಳಿದರು.

ಸ್ಪರ್ಧೆಯ ಶೇ 80ರಷ್ಟು ಓಟ ಕಡಲ ತೀರದ ರಸ್ತೆಯಲ್ಲಿ ಸಾಗಲಿದೆ. ವಿಜೇತರಿಗೆ ಒಟ್ಟು ₹ 4 ಲಕ್ಷದಷ್ಟು ಪುರಸ್ಕಾರ ನೀಡಲಾಗುವುದು ಎಂದರು.

ಪಡುಬಿದ್ರಿ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್, ಓಡು ರನ್ನಿಂಗ್ ಕ್ಲಬ್ನ ದೇವಿಪ್ರಸಾದ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಶಿಲ್ಪಕಲಾ, ಉದಯ ಶೆಟ್ಟಿ, ಸಂತೋಷ್ ಪೂಜಾರಿ, ಸೊಸೈಟಿ ನಿರ್ದೇಶಕ ರಾಜಾರಾಮ್ ರಾವ್, ಅಶೋಕ್ ಸಾಲ್ಯಾನ್, ಪಿ.ಎಸ್.ಆಚಾರ್, ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-28-284888089

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.