‘ಪೇಜಾವರ ಶ್ರೀಗಳ ಅವಹೇಳನ ಖಂಡನೀಯ’

7

‘ಪೇಜಾವರ ಶ್ರೀಗಳ ಅವಹೇಳನ ಖಂಡನೀಯ’

Published:
Updated:
Deccan Herald

ಉಡುಪಿ: ಶಿರೂರು ಲಕ್ಷ್ಮೀವರ ಸ್ವಾಮೀಜಿ ಅವರ ಸಾವಿನ ಪ್ರಕರಣದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ವಿರುದ್ಧ ಅವಹೇಳನ ಮಾಡುವುದು ಸರಿಯಲ್ಲ ಎಂದು ಪ್ರಜಾಪ್ರಭುತ್ವ ಉಳಿಸಿ ಅಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್‌ ಅಂಗೀರಸ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವೇಶ ತೀರ್ಥ ಸ್ವಾಮೀಜಿ ಸನ್ಯಾಸ ನಿಷ್ಠೆ, ರಾಷ್ಟ್ರ ನಿಷ್ಠೆ, ಸಾಮಾಜಿಕ ನಿಷ್ಠೆ, ವಿಶಾಲ ಚಿಂತನೆಯನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಎಲ್ಲೆಡೆ ಅಪಾರ ಭಕ್ತರನ್ನು ಹೊಂದಿದ್ದಾರೆ. ಶಿರೂರು ಶ್ರೀಗಳ ಸಾವಿನ ಪ್ರಕರಣದಲ್ಲಿ ಅನಗತ್ಯವಾಗಿ ಪೇಜಾವರ ಶ್ರೀಗಳ ವಿರುದ್ಧ ಅವಹೇಳನ ಮಾಡುತ್ತಿರುವುದು ಅವರ ಅಭಿಮಾನಿಗಳು ಹಾಗೂ ಭಕ್ತರಿಗೆ ನೋವು ತಂದಿದೆ ಎಂದರು.

ಪೇಜಾವರ ಶ್ರೀಗಳು ಇಳಿವಯಸ್ಸಿನಲ್ಲಿಯೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಇತರೆ ಮಠಗಳು ಮಾಡಲಿ. ಶ್ರೀಗಳ ಅವಹೇಳನ ಸಲ್ಲದು ಎಂದರು.

ಶಿರೂರು ಶ್ರೀಗಳು ರಾಜಕಾರಣಿಯಾಗಿದ್ದರೇ ಹೊರತು ಆದರ್ಶ ಸನ್ಯಾಸಿಯಾಗಿ ಗುರುತಿಸಿಕೊಂಡಿರಲಿಲ್ಲ. ಶಿರೂರು ಶ್ರೀಗಳು ತಮ್ಮ ಅಕಾಲಿಕ ಮರಣವನ್ನು ತಾವೇ ತಂದುಕೊಂಡಿದ್ದು, ಇದಕ್ಕೆ ಪೇಜಾವರ ಶ್ರೀಗಳತ್ತ ಬೊಟ್ಟುಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !