ಬುಧವಾರ, ಜನವರಿ 27, 2021
18 °C
ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ

3,299 ನಾಮಪತ್ರಗಳು ಕ್ರಮಬದ್ಧ: 69 ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕುಂದಾಪುರ, ಕಾರ್ಕಳ ಹಾಗೂ ಕಾಪೂ ತಾಲ್ಲೂಕಿನ 86 ಗ್ರಾಮ ಪಂಚಾಯಿತಿಗಳಿಗೆ ಡಿ.27ರಂದು ನಡೆಯುವ ಎರಡನೇ ಹಂತದ ಚುನಾವಣೆಗೆ 3,380 ನಾಮಪತ್ರಗಳು ಸ್ವೀಕೃತಗೊಂಡಿದ್ದು, 69 ನಾಮಪತ್ರಗಳು ತಿರಸ್ಕೃತಗೊಂಡಿವೆ. 3,299 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ವಿವರ: ಎರಡನೇ ಹಂತದ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದವರ ಪೈಕಿ 1,482 ಮಹಿಳಾ ಅಭ್ಯರ್ಥಿಗಳು ಹಾಗೂ 1,898 ಸಾಮಾನ್ಯ ಅಭ್ಯರ್ಥಿಗಳು ಇದ್ದಾರೆ.

ಕುಂದಾಪುರ ತಾಲ್ಲೂಕಿನ 43 ಗ್ರಾಮ ಪಂಚಾಯಿತಿಗಳ 554 ಸ್ಥಾನಗಳಿಗೆ 674 ಮಹಿಳೆಯರು ಉಮೇದುವಾರಿಕೆ ಸಲ್ಲಿಸಿದ್ದಾರೆ. 905 ಸಾಮಾನ್ಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕಾರ್ಕಳ ತಾಲ್ಲೂಕಿನ 27 ಪಂಚಾಯಿತಿಗಳ 399 ಸ್ಥಾನಗಳಿಗೆ 467 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 1,031 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಕಾಪು ತಾಲೂಕಿನ 16 ಗ್ರಾಮ ಪಂಚಾಯಿತಿಗಳ 290 ಸ್ಥಾನಗಳಿಗೆ 341 ಮಹಿಳೆಯರು ಹಾಗೂ 429 ಸಾಮಾನ್ಯ ಅಭ್ಯರ್ಥಿಗಳು ಸೇರಿ 770 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿದವರಲ್ಲಿ ಪರಿಶಿಷ್ಟ ಜಾತಿಯ 257 ಮಂದಿ, ಎಸ್‌ಟಿ ವರ್ಗಕ್ಕೆ ಸೇರಿದ 214 ಮಂದಿ ಹಾಗೂ ಹಿಂದುಳಿದ ವರ್ಗ ‘ಎ’ಗೆ ಸೇರಿದ 775, ಹಿಂದುಳಿದ ವರ್ಗ ‘ಬಿ’ಗೆ ಸೇರಿದ 177 ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ 1,957 ಅಭ್ಯರ್ಥಿಗಳಿದ್ದಾರೆ.

‘69 ನಾಮಪತ್ರ ತಿರಸ್ಕೃತ‌’

ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಸಲ್ಲಿಕೆಯಾಗಿದ್ದ 3,380 ನಾಮಪತ್ರಗಳಲ್ಲಿ 3,299 ನಾಮಪತ್ರಗಳು ಕ್ರಮಬದ್ಧವಾಗಿವೆ. 69 ನಾಮಪತ್ರಗಳು ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕೃತಗೊಂಡಿವೆ. ಕುಂದಾಪುರ ತಾಲ್ಲೂಕಿನಲ್ಲಿ  1,544 ನಾಮಪತ್ರ ಕ್ರಮಬದ್ಧವಾಗಿದ್ದು 35 ತಿರಸ್ಕೃತಗೊಂಡಿವೆ. ಕಾರ್ಕಳದಲ್ಲಿ ಸ್ವೀಕೃತವಾದ 1,031 ನಾಮಪತ್ರಗಳಲ್ಲಿ 19 ನಾಮಪತ್ರ ತಿರಸ್ಕೃತಗೊಂಡಿದ್ದು, 1,005 ಕ್ರಮಬದ್ಧವಾಗಿವೆ. ಕಾಪು ತಾಲೂಕಿನಲ್ಲಿ ಸ್ವೀಕೃತವಾದ 770 ನಾಮಪತ್ರಗಳಲ್ಲಿ 15 ತಿರಸ್ಕೃತವಾಗಿದ್ದು, 750 ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಮೊದಲ ಹಂತದ ಚುನಾವಣೆಗೆ ಸಿದ್ಧತೆ:

67 ಗ್ರಾಮಪಂಚಾಯಿತಿಗಳ 1,122 ಕ್ಷೇತ್ರಗಳಿಗೆ ಡಿ.22ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚುನಾವಣಾ ಕಣದಲ್ಲಿ 2,349 ಅಭ್ಯರ್ಥಿಗಳು ಉಳಿದಿದ್ದು, 63 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 12 ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಕೆಯಾಗಿಲ್ಲ.

ಚುನಾವಣಾ ಕಣದಲ್ಲಿ 1,108 ಮಹಿಳೆಯರು, 149 ಎಸ್‌ಸಿ, 182 ಎಸ್‌ಟಿ, 543 ಹಿಂದುಳಿದ ‘ಅ’ ವರ್ಗ, 132 ಹಿಂದುಳಿದ ‘ಬ’ ವರ್ಗ ಮತ್ತು 1,343 ಸಾಮಾನ್ಯ ಕ್ಷೇತ್ರದ ಸ್ಪರ್ಧಿಗಳಿದ್ದಾರೆ ಎಂದು ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು