ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಗೆ ತೆರಳಲಿರುವ ಪೇಜಾವರ ಶ್ರೀಗಳು

Last Updated 24 ಅಕ್ಟೋಬರ್ 2020, 16:57 IST
ಅಕ್ಷರ ಗಾತ್ರ

ಉಡುಪಿ: ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನವೆಂಬರ್‌ನಲ್ಲಿ ಅಯೋಧ್ಯೆಗೆ ಭೇಟಿನೀಡಿ ರಾಮನ ದರ್ಶನ ಪಡೆದು, ರಾಮಮಂದಿರ ನಿರ್ಮಾಣ ಕಾಮಗಾರಿ ಪರಿಶೀಲಿಸಲಿದ್ದಾರೆ.

ಅ.26ರಂದು ಉತ್ತರ ಭಾರತ ಯಾತ್ರೆ ಆರಂಭಿಸಲಿರುವ ಶ್ರೀಗಳು ನ.1ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, ಅಂದು ಅಲ್ಲಿನ ಪೇಜಾವರ ಶಾಖಾ ಮಠದಲ್ಲಿ ಉಳಿಯಲಿದ್ದಾರೆ. ಬಳೀಕ ರಾಮನ ಜನ್ಮಕ್ಷೇತ್ರಕ್ಕೆ ತೆರಳಿ, ದೇವರ ದರ್ಶನ ಪಡೆಯಲಿದ್ದಾರೆ, ನಂತರ ಮಂದಿರ ಕಾಮಗಾರಿಯ ಪ್ರಗತಿ ವೀಕ್ಷಣೆ ಮಾಡಲಿದ್ದಾರೆ.

ನಂತರ ಕಾಶಿ ವಿಶ್ವನಾಥನ ದರ್ಶನ ಮಾಡಲಿದ್ದು, 3ರಂದು ಹರಿದ್ವಾರಕ್ಕೆ ಹೋಗಲಿದ್ದು, 5ರಂದು ಬದರೀನಾಥನ ದರ್ಶನ ಪಡೆದು, ತೀರ್ಥಕ್ಷೇತ್ರಗಳ ಯಾತ್ರೆ ಮುಗಿಸಿ 9ರಂದು ದೆಹಲಿಗೆ ತೆರಳಲಿದ್ದಾರೆ. 10 ಹಾಗೂ 11ರಂದು ವಿಶ್ವ ಹಿಂದೂ ಪರಿಷತ್‌ನ ಪ್ರಮುಖರು ಆಯೋಜಿಸಿರುವ ಸಭೆಯಲ್ಲಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT