‘ಶಬರಿಮಲೆ ವಿವಾದ: ಹಿಂದೂಗಳ ಅಭಿಪ್ರಾಯ ಪರಿಗಣಿಸಲಿ’

7
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀ ಒತ್ತಾಯ

‘ಶಬರಿಮಲೆ ವಿವಾದ: ಹಿಂದೂಗಳ ಅಭಿಪ್ರಾಯ ಪರಿಗಣಿಸಲಿ’

Published:
Updated:
Prajavani

ಉಡುಪಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕೊ, ಬೇಡವೊ ಎಂಬ ವಿಚಾರದಲ್ಲಿ ಸಮಸ್ತ ಹಿಂದೂಗಳ ಹಾಗೂ ಧಾರ್ಮಿಕ ಮುಖಂಡರ ಅಭಿಪ್ರಾಯ ಪರಿಗಣಿಸಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.

ಪೇಜಾವರ ಮಠದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಧಾರ್ಮಿಕ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕಾಗಲಿ, ನ್ಯಾಯಾಲಯಗಳಿಗಾಗಲಿ ಇಲ್ಲ. ತೀರ್ಮಾನ ಮಾಡುವವರು ಹಿಂದೂಗಳು ಹಾಗೂ ಧಾರ್ಮಿಕ ಮುಖಂಡರು ಮಾತ್ರ ಎಂದರು.

ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡುವುದನ್ನು ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ವಿರೋಧಿಸುತ್ತಿವೆ. ಹಾಗಾಗಿ, ಕೇರಳ ಸರ್ಕಾರ ಜನತೆಯ ಭಾವನೆಗಳಿಗೆ ಬೆಲೆ ಕೊಡಬೇಕು. ನ್ಯಾಯಾಲಯದ ತೀರ್ಪು ಮುಂದಿಟ್ಟುಕೊಂಡು ಹಠ ಹಿಡಿಯಬಾರದು. ಗಲಭೆಗಳಿಗೆ ಆಸ್ಪದ ನೀಡಬಾರದು ಎಂದು ಸಲಹೆ ನೀಡಿದರು.

ಶ್ರೀರಾಮ ಕೂಡ ಜನಾಭಿಪ್ರಾಯದಂತೆಯೇ ಸೀತೆಯನ್ನು ವಾಲ್ಮೀಕಿ ಆಶ್ರಮಕ್ಕೆ ಕಳುಹಿಸಿಕೊಟ್ಟ. ಸೀತೆಯದ್ದು ಯಾವ ತಪ್ಪಿಲ್ಲ ಎಂಬ ಸತ್ಯ ರಾಮನಿಗೆ ಗೊತ್ತಿದ್ದರೂ ಜನರ ಅಭಿಪ್ರಾಯಕ್ಕೆ ಬೆಲೆಕೊಟ್ಟ. ಹಾಗೆಯೇ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಜನಾಭಿಪ್ರಾಯಕ್ಕೆ ಬೆಲೆ ಕೊಡಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !