ಹಿರಿಯಡಕ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಪೆರ್ಣಂಕಿಲ ಶಾಖಾಮಠದ ನವನಿರ್ಮಾಣ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಈಚೆಗೆ ನಡೆಯಿತು.
ಪುರಾತನ ಶಾಖಾಮಠ ಶಿಥಿಲಗೊಂಡಿದ್ದು, ಕ್ಷೇತ್ರದ ಸಮಗ್ರ ಜೀರ್ಣೋದ್ಧಾರವಾಗುವ ಸಂದರ್ಭದಲ್ಲಿ ಶಾಖಾಮಠದ ನವನಿರ್ಮಾಣವನ್ನು ಭಕ್ತರ ಸಹಾಯದಿಂದ ಪಾರಂಪರಿಕ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ವಾಸ್ತುತಂತ್ರಜ್ಞ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ, ವಿದ್ವಾನ್ ಮಧುಸೂಧನ ತಂತ್ರಿಗಳ ಮಾರ್ಗದರ್ಶನದಲ್ಲಿ ಪೇಜಾವರ ಮಠದ ಯತಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್, ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಪದಾಧಿಕಾರಿಗಳಾದ ಸದಾನಂದ ಪ್ರಭು, ಉಮೇಶ್ ನಾಯಕ್, ಸಂದೀಪ್ ನಾಯಕ್ ಹೆಬ್ಬಾಗಿಲು, ಮಠದ ವ್ಯವಸ್ಥಾಪಕ ಸುರೇಶ್ ತಂತ್ರಿ, ಮಹೇಶ್ ಕುಲಕರ್ಣಿ, ಶ್ರೀಪತಿ ಭಟ್, ಬಾಲಚಂದ್ರ ಭಟ್, ಸುನೀತಾ ನಾಯಕ್, ಬೇಬಿ ನಾಯಕ್ ಇದ್ದರು. ಶಿಲಾನ್ಯಾಸದ ಸವಿನೆನಪಿಗಾಗಿ ಬಿಲ್ವಪತ್ರೆಯ ಗಿಡ ನೆಡುವ ಮೂಲಕ ದೇವಸ್ಥಾನದ ಪರಿಸರದಲ್ಲಿ ಸಾವಿರ ಸಸಿ ನೆಡುವ ವನಮಹೋತ್ಸವ ಅಭಿಯಾನಕ್ಕೆ ಪೇಜಾವರ ಶ್ರೀಗಳು ಚಾಲನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.