ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸಾಮರ್ಥ್ಯದ ಮಕ್ಕಳು ಹೊರೆಯಲ್ಲ ಆಸ್ತಿ

ಮಾನಸ ವಿಶೇಷ ಶಾಲೆಯ ರಜತ ಮಹೋತ್ಸವದಲ್ಲಿ ಬಿಷಪ್ ಜೆರಾಲ್ಡ್ ಲೋಬೊ
Last Updated 25 ನವೆಂಬರ್ 2022, 14:36 IST
ಅಕ್ಷರ ಗಾತ್ರ

ಉಡುಪಿ: ವಿಶೇಷ ಸಾಮರ್ಥ್ಯದ ಮಕ್ಕಳು ಹೊರೆಯಲ್ಲ; ಅವರಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ಸಿಕ್ಕರೆ ಸಮಾಜದ ಆಸ್ತಿಯಾಗುತ್ತಾರೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಶುಕ್ರವಾರ ಬಂಟಕಲ್ ಸಮೀಪದ ಮಾನಸ ವಿಶೇಷ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶೇಷ ಸಾಮರ್ಥ್ಯದ ಮಕ್ಕಳಲ್ಲಿಯೂ ವಿಶೇಷ ಪ್ರತಿಭೆ ಇದ್ದು, ಸೂಕ್ತ ಪ್ರೋತ್ಸಾಹ ನೀಡಬೇಕಾದ ಜವಾಬ್ದಾರಿ ಸಮಾಜದ್ದಾಗಿದ್ದು, ಮಕ್ಕಳ ಬಾಳು ಬೆಳಗಲು ಸಹಕಾರಿಯಾಗುತ್ತದೆ ಎಂದರು.

ಪ್ರೀತಿ ಇರುವ ಕಡೆಯಲ್ಲಿ ದೇವರು ಹಾಗೂ ಶಾಂತಿ ನೆಲೆಸಿರುತ್ತದೆ. ಇದರಿಂದ ಸೌಹಾರ್ದದಿಂದ ಬದಕಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಾನಸ ವಿಶೇಷ ಮಕ್ಕಳ ಸಂಸ್ಥೆಯ ಸಾಧನೆ ಸಮಾಜಕ್ಕೆ ಮಾದರಿ. ವಿಶೇಷ ಸಾಮರ್ಥ್ಯದ ಮಕ್ಕಳನ್ನು ತರಬೇತಿಗೊಳಿಸುವ ಮೂಲಕ ಅವರ ಜೀವನದಲ್ಲಿ ಬೆಳಕು ಕಾಣಲು ಸಾಧ್ಯವಾಗುವಂತೆ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ಥಾಪಕ ವಿಶ್ವಸ್ಥರು, ಟ್ರಸ್ಟಿಗಳು ಹಾಗೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಪ್ರಾಂಶುಪಾಲರು, ಹಾಸ್ಟೆಲ್ ವಾರ್ಡನ್‌ಗಳನ್ನು ಗೌರವಿಸಲಾಯಿತು. ಮಾನಸ ಸಂಸ್ಥೆಯ 25 ವರ್ಷದ ಸಾರ್ಥಕ ಸೇವೆಯ ಕುರಿತು ನಿರ್ಮಿಸಲಾದ ಸಾಕ್ಷ್ಯ ಚಿತ್ರ ಹಾಗೂ ಸ್ಮರಣ ಸಂಚಿಕೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮಿನೇಜಸ್ ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ವಿನಯ ಕುಮಾರ ಸೊರಕೆ, ಪ್ರಮುಖರಾದ ಜೆಫ್ರಿನ್ ಮೊನಿಸ್, ನೊಯೆಲ್ ರಸ್ಕಿನಾ, ಹರೀಶ್ ಶೆಟ್ಟಿ, ಹಾರ್ಸ್ಟ್ ಸ್ನೈಡರ್, ಮಾರ್ಗರೆಟ್ ಸ್ನೈಡರ್, ಐಡಾ ಲೋಬೊ, ಪಾಂಬೂರು ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರು ಹೆನ್ರಿ ಮಸ್ಕರೇನಸ್, ಮಾನಸ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ.ಎಡ್ವರ್ಡ್ ಲೋಬೊ, ಮಾಜಿ ಅಧ್ಯಕ್ಷ ರೆಮಿಡಿಯಾ ಡಿಸೋಜಾ, ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶದ ಅಧ್ಯಕ್ಷೆ ಮೇರಿ ಡಿಸೋಜಾ, ಸಂಚಾಲಕ ಎಲ್.ರೋಯ್ ಕಿರಣ್ ಕ್ರಾಸ್ತಾ, ಕಾರ್ಯದರ್ಶಿ ಜೊಸೇಫ್ ನೊರೊನಾ, ಕೋಶಾಧಿಕಾರಿ ವಲೇರಿಯನ್ ಫೆರ್ನಾಂಡಿಸ್, ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷೆ ವನಿತಾ ಶೆಟ್ಟಿಗಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT