ಕವಿತೆಗಳಿಗಿದೆ ಭಾವೈಕ್ಯತೆ ಮೂಡಿಸುವ ಶಕ್ತಿ

6
ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಕವಿ ಎಚ್‌.ಎಸ್‌.ವೆಂಕಟೇಶ ಮೂರ್ತಿ

ಕವಿತೆಗಳಿಗಿದೆ ಭಾವೈಕ್ಯತೆ ಮೂಡಿಸುವ ಶಕ್ತಿ

Published:
Updated:
Deccan Herald

ಉಡುಪಿ: ಭಾಷೆ, ಪಂಥವನ್ನೂ ಮೀರಿ ಸಮಾಜದಲ್ಲಿ ಭಾವೈಕ್ಯತೆಯನ್ನು ಮೂಡಿಸುವ ಶಕ್ತಿ ಕವಿತೆಗಳಿಗಿದೆ ಎಂದು ಕವಿ ಎಚ್‌.ಎಸ್‌.ವೆಂಕಟೇಶ ಮೂರ್ತಿ ಹೇಳಿದರು.

ಎಂಜಿಎಂ ಕಾಲೇಜು ಸಭಾಂಗಣದಲ್ಲಿ ಶನಿವಾರ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿತೆಗಳು ಮೇಲ್ನೋಟಕ್ಕೆ ಸರಳ ಎನಿಸಿದರೂ ಅದರೊಳಗಿನ ವಿಷಯ ಗಂಭೀರವಾದುದು. ಕೆಲವೊಮ್ಮೆ ಸರಳವಾಗಿ ಬರೆಯುವುದು ಸುಲಭ ಎನಿಸಿದರೆ, ಕಷ್ಟಕರವಾಗಿ ಬರೆಯುವುದು ಸುಲಭವಾಗಿ ಬಿಡುತ್ತದೆ. ಇದು ಕವಿತೆಗಿರುವ ಶಕ್ತಿ ಎಂದರು.

ದೋಣಿ ಮೈಲುಗಟ್ಟೆಲೆ ಸಮುದ್ರದಲ್ಲಿ ಸಾಗಿದರೂ ಆಳ ಎಷ್ಟಿದೆ ಎಂಬುದನ್ನು ನೋಡುವುದಿಲ್ಲ. ಮನುಷ್ಯರು ಕೂಡ ವರ್ಷಾನುಗಟ್ಟಲೆ ಜತೆಗಿದ್ದರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಿಲ್ಲ. ಒಬ್ಬರನ್ನೊಬ್ಬರು ಅರಿಯುವುದು ಮುಖ್ಯ ಎಂದು ಎಚ್‌ಎಸ್‌ವಿ ಹೇಳಿದರು.

ಕವಿತೆ ಎಂಬುದು ಧ್ಯಾನವಿದ್ದಂತೆ. ಕವಿತೆಯ ಆಳಕ್ಕಿಳಿದಾಗ ಮಾತ್ರ ಅದು ದಕ್ಕುತ್ತದೆ. ಬರೆಯುತ್ತಾ ಹೋದಂತೆಲ್ಲ ಸುಂದರ ಕವಿತೆಗಳು ರಚನೆಯಾಗುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕವಿ ಬಿ.ಆರ್.ಲಕ್ಷ್ಮಣರಾವ್ ‘ಎಷ್ಟಾದರೆ ಸಾಕು’ ಹಾಗೂ ‘ದೇವರೇ ಅಗಾಧ ನಿನ್ನ ಕರುಣೆಯ ಕಡಲು’ ಕವನ ವಾಚಿಸಿ ರಂಜಿಸಿದರು. ಕಾಲೇಜು ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಉಪಸ್ಥಿತರಿದ್ದರು.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !