ಸೋಮವಾರ, ಜನವರಿ 17, 2022
19 °C
ವಿಜೇತರಿಗೆ ಬಹುಮಾನ ವಿತರಣೆ

ಪೊಲೀಸ್ ಕ್ರೀಡಾಕೂಟ ಸಮಾರೋಪ: ನಾಗೇಶ್ ಗೌಡ, ಜಯಾ ವೈಯಕ್ತಿಕ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಇಲ್ಲಿನ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಬೈಂದೂರು ಠಾಣೆಯ ನಾಗೇಶ್ ಗೌಡ ಪುರುಷರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡರು. ಮಹಿಳಾ ವಿಭಾಗದಲ್ಲಿ ಮಹಿಳಾ ಠಾಣೆಯ ಜಯಾ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಶುಕ್ರವಾರ ನಡೆಸ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು. ವಾಲಿಬಾಲ್‌ ಪಂದ್ಯದಲ್ಲಿ ಡಿಪಿಎರ್ ಪ್ರಥಮ ಸ್ಥಾನ ಪಡೆದುಕೊಂಡರೆ, ಡಿಎಆರ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಡಿಪಿಒ ಪ್ರಥಮ, ಕುಂದಾಪುರ ತಂಡ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಉಡುಪಿ ಪ್ರಥಮ, ಕುಂದಾಪುರ ದ್ವಿತೀಯ, ಕಬ್ಬಡ್ಡಿ ಪಂದ್ಯಾಟದಲ್ಲಿ ಡಿಎಆರ್‌ ಪ್ರಥಮ, ಉಡುಪಿ ದ್ವಿತೀಯ ಬಹುಮಾನ ಪಡೆದುಕೊಂಡಿತು.

4x100 ಮೀಟರ್ ರಿಲೇ ಪುರುಷರ ಸ್ಪರ್ಧೆಯಲ್ಲಿ ಡಿಎಆರ್‌ ಪ್ರಥಮ, ಡಿಪಿಒ ದ್ವಿತೀಯ ಹಾಗೂ ಕಾರ್ಕಳ ಎಸ್‌ಬಿ ತೃತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಕುಂದಾಪುರ ಪ್ರಥಮ, ಕಾರ್ಕಳ ದ್ವಿತೀಯ, ಉಡುಪಿ ತೃತೀಯ ಸ್ಥಾನ ಪಡೆದುಕೊಂಡಿತು.

4x400 ರಿಲೇ ವಿಭಾಗದಲ್ಲಿ ಡಿಎಆರ್ ಪ್ರಥಮ, ಕಾರ್ಕಳ ದ್ವಿತೀಯ, ಡಿಪಿಒ ತೃತೀಯ ಬಹುಮಾನ ಗೆದ್ದುಕೊಂಡಿತು. ಥ್ರೋಬಾಲ್ ಮಹಿಳೆಯರ ಸ್ಪರ್ಧೆಯಲ್ಲಿ ಉಡುಪಿ ಮೊದಲ ಹಾಗೂ ಕುಂದಾಪುರ ಎರಡನೇ ಸ್ಥಾನ ಪಡೆಯಿತು. 

ಪ್ರೆಸ್‌ ಇಲೆವೆನ್ ಹಾಗೂ ಎಸ್‌ಪಿ ಇಲೆವೆನ್ ನಡುವೆ ನಡೆದ ಕ್ರಿಕೆಟ್‌ ಪಂದ್ಯದಲ್ಲಿ ಎಸ್‌ಪಿ ಇಲೆವೆನ್ ಗೆಲುವು ಸಾಧಿಸಿ ಮೊದಲ ಬಹುಮಾನ ಪಡೆದರೆ, ಪ್ರೆಸ್‌ ಇಲೆವೆನ್‌ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಎಸ್‌ಪಿ ಹಾಗೂ ಎಎಸ್‌ಪಿ ನಡುವಿನ ಶಾಟ್‌ಪಟ್ ಸ್ಪರ್ಧೆಯಲ್ಲಿ ಎಸ್‌ಪಿ ವಿಷ್ಣುವರ್ಧನ್‌ ಪ್ರಥಮ, ಎಎಸ್‌ಪಿ ಕುಮಾರಚಂದ್ರ ದ್ವಿತೀಯ ಸ್ಥಾನ ಪಡೆದರೆ, ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಎಎಸ್‌ಪಿ ಕುಮಾರಚಂದ್ರ ಪ್ರಥಮ, ಎಸ್‌ಪಿ ವಿಷ್ಣುವರ್ಧನ್ ದ್ವಿತೀಯ ಸ್ಥಾನ, ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ವಿಷ್ಣುವರ್ಧನ್‌ ಪ್ರಥಮ, ಕುಮಾರಚಂದ್ರ ದ್ವಿತೀಯ ಬಹುಮಾನ ಗೆದ್ದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಎಸ್‌ಟಿ ವಿಭಾಗದ ಸಹಾಯಕ ಆಯಕ್ತರಾದ ಡಾ.ನಿಮಿಷಾಂಭ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಜಿಲ್ಲಾಧಿಕಾರಿ ಕೂರ್ಮಾರಾವ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್‌ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಎಎಸ್‌ಪಿ ಕುಮಾರಚಂದ್ರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು