ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ರಸ್ತೆ ದುರವಸ್ಥೆ: ವಾಹನ ಸವಾರರಿಗೆ ಸಂಕಷ್ಟ

ಡಯಾನ ಕುಕ್ಕಿಕಟ್ಟೆ ಮುಖ್ಯ ರಸ್ತೆಯಲ್ಲಿ ಹೊಂಡ: ಮಳೆ ಬಂದರೆ ಕೆರೆಯಂತಾಗುವ ಮಾರ್ಗ
Published : 11 ಸೆಪ್ಟೆಂಬರ್ 2024, 5:07 IST
Last Updated : 11 ಸೆಪ್ಟೆಂಬರ್ 2024, 5:07 IST
ಫಾಲೋ ಮಾಡಿ
Comments

ಉಡುಪಿ: ನಗರದ ಡಯಾನ ಥಿಯೇಟರ್‌ನಿಂದ ಕುಕ್ಕಿಕಟ್ಟೆ ಕಡೆಗೆ ಸಾಗುವ ಮುಖ್ಯರಸ್ತೆಯ ಅವ್ಯವಸ್ಥೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.

ರಸ್ತೆಯಲ್ಲಿ ಬೃಹತ್‌ ಹೊಂಡಗಳು ನಿರ್ಮಾಣವಾಗಿರುವುದರಿಂದ ಈ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದೇ ಸವಾಲಾಗಿದೆ.

ರಸ್ತೆ ಹೊಂಡ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವುದು ಇಲ್ಲಿ ಸಾಮಾನ್ಯವಾಗಿದೆ.

ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಬರುವ ಈ ರಸ್ತೆ ಹಲವು ತಿಂಗಳುಗಳಿಂದ ಹದಗೆಟ್ಟಿದ್ದರೂ ಸಂಬಂಧಪಟ್ಟವರು ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಬಿಸಿಲಿನ ವಾತಾವರಣವಿದ್ದರೂ ಸಂಬಂಧಪಟ್ಟವರು ರಸ್ತೆಯ ಹೊಂಡ ಮುಚ್ಚುವ ಗೋಜಿಗೆ ಹೋಗಿಲ್ಲ ಎಂದೂ ದೂರಿದ್ದಾರೆ.

ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗಿ ಸಂಪೂರ್ಣ ಹದಗೆಟ್ಟಿದೆ. ಇನ್ನು ಮಳೆ ಬಂದಾಗ ಈ ರಸ್ತೆಯು ಕೆರೆಯಂತಾಗುತ್ತದೆ. ರಸ್ತೆಯಲ್ಲಿ ಮಳೆನೀರು ಸಂಗ್ರಹಗೊಂಡಾಗ ಎಲ್ಲಿ ಹೊಂಡಗಳಿವೆ ಎಂಬುದು ಗೊತ್ತಾಗದೆ ದ್ವಿಚಕ್ರ ವಾಹನ ಸವಾರರು ಪರದಾಡಬೇಕಾಗುತ್ತದೆ ಎಂದು ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಹೇಳುತ್ತಾರೆ.

ರಸ್ತೆ ಹದಗೆಟ್ಟಿರುವುದರಿಂದ ಅದರಲ್ಲಿ ದಿನನಿತ್ಯ ಓಡಾಡುವ ಶಾಲಾ ಮಕ್ಕಳಿಗೂ ತೀವ್ರ ಸಮಸ್ಯೆಯಾಗುತ್ತಿದೆ.

ಡಯಾನ –ಕುಕ್ಕಿಕಟ್ಟೆ ಮುಖ್ಯ ರಸ್ತೆಯು ಲೋಕೋಪಯೋಗಿ ಇಲಾಖೆಯ ಅಧೀನಕ್ಕೆ ಬರುತ್ತದೆ. ರಸ್ತೆ ತುಂಬಾ ಹದಗೆಟ್ಟಿರುವ ಬಗ್ಗೆ ಜನರು ದೂರಿರುವ ಕಾರಣ ಬೃಹತ್‌ ಹೊಂಡಗಳು ಇರುವಲ್ಲಿ ಸಮತಟ್ಟು ಮಾಡಲಾಗುವುದು

-ರಾಯಪ್ಪ ಪೌರಾಯುಕ್ತ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT