ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಶಿಕ್ಷಕರ ಪ್ರತಿಭಟನೆ: ತರಗತಿಗಳು ಸ್ಥಗಿತ

ಜಿಲ್ಲೆಯ ಪ್ರಾಥಮಿಕ ಶಾಲೆಗಳ 600 ಮಂದಿ ಶಿಕ್ಷಕರು ಭಾಗಿ
Published : 13 ಆಗಸ್ಟ್ 2024, 3:14 IST
Last Updated : 13 ಆಗಸ್ಟ್ 2024, 3:14 IST
ಫಾಲೋ ಮಾಡಿ
Comments

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರೂ ಪಾಲ್ಗೊಂಡಿದ್ದು, ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ ಕಡಿಮೆ ಇತ್ತು. ಹಲವು ಶಾಲೆಗಳಲ್ಲಿ ತರಗತಿಗಳು ಸ್ಥಗಿತಗೊಂಡಿದ್ದವು.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರತಿ ಶಾಲೆಗಳಿಂದಲೂ ಶಿಕ್ಷಕರು ತೆರಳಿದ್ದರು. ಇದರಿಂದ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಸಮಸ್ಯೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಪ್ರತಿಭಟನೆಗೆ ತೆರಳದ ಪ್ರಾಥಮಿಕ ಶಾಲಾ ಶಿಕ್ಷಕರು ಎಂದಿನಂತೆ ತರಗತಿ ನಡೆಸಿದ್ದಾರೆ ಎಂದು ಶಾಲೆಯೊಂದರ ಶಿಕ್ಷಕಿ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲೆಯ 600 ಮಂದಿ ಶಿಕ್ಷಕರು ಪಾಲ್ಗೊಂಡಿದ್ದರು. ಇನ್ನುಳಿದ ಶಿಕ್ಷಕರು ಬೆಂಬಲ ಸೂಚಿಸಿ ಸಿ.ಎಲ್‌. ಹಾಕಿ ಮನೆಯಲ್ಲೇ ಉಳಿದಿದ್ದರು. ಜಿಲ್ಲೆಯಲ್ಲಿ ಶೇ 95 ರಷ್ಟು ಶಾಲೆಗಳಲ್ಲೂ ತರಗತಿಗಳು ಸ್ಥಗಿತಗೊಂಡಿದ್ದವು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ತಿಳಿಸಿದರು.

ಬ್ರಹ್ಮಾವರ ತಾಲ್ಲೂಕಿನಲ್ಲಿ 16 ಶಾಲೆಗಳು, ಬೈಂದೂರಿನ 20 ಶಾಲೆಗಳಲ್ಲಿ ತರಗತಿಗಳು ಸ್ಥಗಿತಗೊಂಡಿದ್ದವು. ಬೇರೆಲ್ಲೂ ಸಮಸ್ಯೆಯಾಗಿಲ್ಲ. ಉಳಿದ ತಾಲ್ಲೂಕುಗಳಲ್ಲಿ ಕೆಲವು ಶಿಕ್ಷಕರು ಪ್ರತಿಭಟನೆಗೆ ತೆರಳಿದ್ದರೂ ಇತರ ಶಿಕ್ಷಕರು ಮಕ್ಕಳಿಗೆ ತರಗತಿ ನಡೆಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಕೆ. ತಿಳಿಸಿದರು.

ಕಸಾಪ: ಗ್ರಂಥಪಾಲಕರ ದಿನಾಚರಣೆ ಸನ್ಮಾನ ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ತಾಲ್ಲೂಕು ಘಟಕದ ವತಿಯಿಂದ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಸೋಮವಾರ ಅಜ್ಜರಕಾಡಿನ ಕೇಂದ್ರ ಗ್ರಂಥಾಲಯದ ಕಚೇರಿಯಲ್ಲಿ ನಗರ ಮುಖ್ಯ ಗ್ರಂಥಾಲಯ ಅಧಿಕಾರಿ ನಳಿನಿ ಜಿ.ಐ. ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಥಮ ದರ್ಜೆ ಸಹಾಯಕಿ ಪ್ರೇಮಾ ಎಂ. ಅವರನ್ನು ಸನ್ಮಾನಿಸಲಾಯಿತು. ಕಸಾಪ ಉಡುಪಿ ತಾಲ್ಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್.ಪಿ. ಅವರು ಗೌರವಿಸಿ ಅಭಿನಂದಿಸಿದರು. ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ ಜಿಲ್ಲಾ ಕಸಾಪ ಸಹಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ ಉಡುಪಿ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ರಂಜಿನಿ ವಸಂತ್ ಸದಸ್ಯರಾದ ವಸಂತ್ ಮನೆಯೇ ಗ್ರಂಥಾಲಯದ ಸಂಚಾಲಕರಾದ ರಾಘವೇಂದ್ರ ಪ್ರಭು ಕರ್ವಾಲು ಮತ್ತು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT