ಶುಕ್ರವಾರ, ಏಪ್ರಿಲ್ 16, 2021
31 °C
ಕುಂದುಕೊರತೆ ಸಭೆಯಲ್ಲಿ ಎಸ್‌ಐ ಭೀಮಾಶಂಕರ

ಸಮಸ್ಯೆ ಇದ್ದರೆ ಇಲಾಖೆ ಗಮನಕ್ಕೆ ತನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ಅನುಸೂಚಿತ ಜಾತಿ ಮತ್ತು ಪಂಗಡದ ಜನರು ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ನೇರವಾಗಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಕಾನೂನು ಪ್ರಕಾರ ಈ ಸಮುದಾಯಕ್ಕೆ ನ್ಯಾಯ ಒದಗಿಸುವ ಪ್ರಯತ್ನವನ್ನು ಇಲಾಖೆ ಮಾಡುತ್ತದೆ ಎಂದು ಗಂಗೊಳ್ಳಿ ಎಸ್‌ಐ ಭೀಮಾಶಂಕರ ಎಸ್. ಹೇಳಿದರು.

ಗುಜ್ಜಾಡಿ ನಾಯಕವಾಡಿಯಲ್ಲಿ ಭಾನುವಾರ ಸಂಜೆ ನಡೆದ ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಸಮುದಾಯಗಳ ಪರವಾಗಿ ಅಹವಾಲುಗಳನ್ನು ಮಂಡಿಸಿದ ಭಾಸ್ಕರ ಎಚ್. ಜಿ, ಅಶೋಕ ಎನ್. ಡಿ, ರಾಘವೇಂದ್ರ ಮೇಲ್‌ಗಂಗೊಳ್ಳಿ, ಮಂಜುನಾಥ, ನಿತೇಶ್, ಇತರರು, ‘ಗಂಗೊಳ್ಳಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳ ಮೀನುಗಾರರಿಗೆ ‘ಅ‍’ ವರ್ಗದ ಸದಸ್ಯತ್ವ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆ ನಡೆಸಬೇಕು. ಪಂಚಾಯಿತಿಗಳ ಶೇ 25 ಮೀಸಲು ನಿಧಿಯ ಸಮರ್ಪಕ ಬಳಕೆ ಆಗಬೇಕು. ಗಂಗೊಳ್ಳಿ ಲೈಟ್‌ಹೌಸ್ ಬಳಿ ಸಾರ್ವಜನಿಕ ರುದ್ರಭೂಮಿ ಜಾಗದಲ್ಲಿ ಆಗಿರುವ ಅತಿ
ಕ್ರಮಣ ತೆರವುಗೊಳಿಸಬೇಕು. ಗುಜ್ಜಾಡಿ
ಗ್ರಾಮದ ಲೈಟ್‌ಹೌಸ್ ಸಮೀಪ ಸರ್ಕಾರಿ ಭೂಮಿ ಕಬಳಿಸಲಾಗಿದ್ದು ಅದರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಶ್ರೀಧರ ನಾಯಕವಾಡಿ ಸ್ವಾಗತಿಸಿದರು. ನಿತೇಶ್ ವಂದಿಸಿದರು. ಚೆನ್ನಬಸವೇಶ್ವರ ಯುವಕ ಮಂಡಲದ ಅಧ್ಯಕ್ಷ ಕೃಷ್ಣ ಕೆ, ಮಂಜುನಾಥ, ಎಚ್‌.ಸಿ ಗಿರೀಶ್, ಪರಿಶಿಷ್ಟ ಸಂಘಟನೆಗಳ ಮುಖಂಡರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.