ಅಥೆನ್ಸ್: ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಸಾರುವ ಸಂದೇಶದೊಂದಿಗೆ ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ನಲ್ಲಿ ಉಡುಪಿಯ ಪುತ್ತಿಗೆ ಮಠದ ಸುಗಣೇಂದ್ರ ತೀರ್ಥ ಸ್ವಾಮೀಜಿಗಳು ‘ಧಾರ್ಮಿಕ ಪುನರುಜ್ಜೀವನ ಮತ್ತು ಅಥೆನ್ಸ್ ಘೋಷಣೆ’ ಹೆಸರಿನಲ್ಲಿ ಇದೇ 26–27ರಂದು ಎರಡು ದಿನಗಳ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ‘ದೇವಿ ಚರಿತ್ರೆಯ ಮೊದಲ ನೋಟ’ ಹೆಸರಿನ ಚಲನಚಿತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಅನ್ಯಾಯದ ವಿರುದ್ಧ ಶಾಂತಿಯನ್ನು ಸಾರಲು ಮತ್ತು ಅಹಂಕಾರವನ್ನು ಅಳಿಸಲು ಸದಾಚಾರದ ಬೋಧನೆ ಇಂದಿನ ತುರ್ತು ಎನಿಸಿದೆ. ವಿಶ್ವದ ಉಳಿವು ಗೀತೆಯ ಸಂದೇಶ ಹಾಗೂ ದೇವಿಯ ಶಾಕ್ತ ಪರಿಣಾಮಗಳನ್ನು ಅವಲಂಬಿಸಿದೆ’ ಎಂದರು.

ಮಹಿಷಾಸುರನನ್ನು ಉದಾಹರಿಸಿದ ಅವರು, ಅನ್ಯಾಯದ ವಿರುದ್ಧ ಯಾವಾಗಲೂ ಶಾಂತಿ ಮೇಲುಗೈ ಸಾಧಿಸುತ್ತದೆ. ಅಂತಹ ಸಂದೇಶವನ್ನು ಈ ಚಲನಚಿತ್ರ ಸಾರುತ್ತದೆ’ ಎಂದರು.

‘ಜಗತ್ತಿನಲ್ಲಿ ಸಹೋದರತ್ವ ಮತ್ತು ಏಕತೆಯ ಭಾವನೆಯನ್ನು ತರುವ ದಿಸೆಯಲ್ಲಿ ಅಥೆನ್ಸ್ನಲ್ಲಿ ಒಲಿಂಪಿಕ್ಸ್ ಮೂಲಕ ವಸುದೈವ ಕುಟುಂಬಕಂ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಯಿತು. ಅಂತಹ ದಿವ್ಯ ಪರಂಪರೆಯಲ್ಲೇ ಈ ಕಾರ್ಯಕ್ರಮವನ್ನೂ ಅಥೆನ್ಸ್ನಲ್ಲಿ ಆಯೋಜಿಸಲಾಗಿದೆ. ಭಾರತ ಮತ್ತು ಪಶ್ಚಿಮ ಎಂಬ ಎರಡು ಮಹಾನ್ ನಾಗರಿಕತೆಗಳ ಸಂಗಮವನ್ನು ಗುರುತಿಸುವ ನಿಟ್ಟಿನಲ್ಲಿನ ಇದೊಂದು ಮಹತ್ವದ ಹೆಜ್ಜೆ’ ಎಂದು ಅವರು ಬಣ್ಣಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದ ಗ್ರೀಸ್ ಮತ್ತು ಭಾರತೀಯ ಅಭ್ಯಾಗತರಿಗೆ ಸ್ವಾಮೀಜಿ ‘ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ’ ನೀಡಿದರು. ಬೋಸಾಚನವಾಸಿ ಅಕ್ಷರಧಾಮ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥೆಯ (ಬಿಎಪಿಎಸ್) ಭದ್ರೇಶ್ ದಾಸ್ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಗ್ರೀಸ್ನ ಭಾರತೀಯ ರಾಯಭಾರ ಕಚೇರಿಯ ಗಣ್ಯರು, ಭಾರತೀಯ ಧರ್ಮ ಗುರುಗಳು, ವಿದ್ವಾಂಸರು ಹಾಗೂ ಚಿಂತಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.