ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗರತ್ನ ಮಾಲಿಕೆ: ಗೃಹ ಸಂಗೀತ ಸರಣಿ ಆರಂಭ

Last Updated 27 ಜೂನ್ 2022, 15:42 IST
ಅಕ್ಷರ ಗಾತ್ರ

ಉಡುಪಿ: ಶಾಸ್ತ್ರೀಯ ಸಂಗೀತ ಉಳಿದರೆ ಸಂಗೀತದ ಎಲ್ಲ ಪ್ರಾಕಾರಗಳು ಉಳಿಯುತ್ತವೆ. ಒತ್ತಡದ ಬದುಕಿಗೆ ಸಂಗೀತ ಮದ್ದು ಎಂದು ನಗರಸಭಾ ಸದಸ್ಯೆ ಕಲ್ಪನಾ ಸುಧಾಮ ಅಭಿಪ್ರಾಯಪಟ್ಟರು.

ಉಡುಪಿಯ ರಾಗಧನ ಸಂಸ್ಥೆಯಿಂದ ಮಣಿಪಾಲದ ಎಎಲ್ಎನ್ ಲೇಔಟ್‌ನಲ್ಲಿರುವ ನರಸಿಂಹ ನಾಯಕ್ ನಿವಾಸದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರು ಸಹೋದರರು ಖ್ಯಾತಿಯ ಹರಿಹರನ್ ಹಾಗೂ ಅಶೋಕ್ ಸಂಗೀತ ಕಛೇರಿ ಗಮನ ಸೆಳೆಯಿತು. ವಯಲಿನ್‌ನಲ್ಲಿ ಮತ್ತೂರು ವಿಶ್ವಜಿತ್, ಮೃದಂಗದಲ್ಲಿ ಅನಿರುದ್ಧ ಭಟ್ ಹಾಗೂ ಮೋರ್ಸಿಂಗ್‌ನಲ್ಲಿ ಡಿ.ಎಸ್.ಪ್ರಸನ್ನ ಕುಮಾರ್ ಸಹಕರಿಸಿದರು.

150ಕ್ಕೂ ಹೆಚ್ಚು ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಗಧನ ಅಧ್ಯಕ್ಷ ಡಾ.ಕಿರಣ ಹೆಬ್ಬಾರ್ ಸ್ವಾಗತಿಸಿದರು. ಕಾರ್ಯದರ್ಶಿ ಉಮಾಶಂಕರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT