ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ಅಲ್ಲಲ್ಲಿ ಮಳೆ ಹಾನಿ

Last Updated 7 ಜುಲೈ 2022, 4:20 IST
ಅಕ್ಷರ ಗಾತ್ರ

ಕಾರ್ಕಳ: ಇಲ್ಲಿನ ಎಸ್‌ವಿಟಿ ಸರ್ಕಲ್ ಸಮೀಪದ ಅಂಗಡಿ ಮೇಲೆ ಬುಧವಾರ ಅಶ್ವತ್ಥ ಮರವೊಂದು ಬಿದ್ದು ಅಪಾರ ಹಾನಿಯಾಗಿದೆ. ಪಾರ್ಕಿಂಗ್ ಮಾಡಲಾದ ಆಟೊರಿಕ್ಷಾ, ಬ್ಯಾಗ್ ಅಂಗಡಿ, ವಡಾ ಪಾವ್ ಅಂಗಡಿಗಳ ಮೇಲೆ ಮರ ಉರುಳಿ ಬಿದ್ದಿದೆ. ಕೂಡಲೇ ಅರಣ್ಯ ಇಲಾಖೆ, ತಾಲ್ಲೂಕು ಕಚೇರಿ ಸಿಬ್ಬಂದಿ, ಸ್ಥಳೀಯರು ಆಗಮಿಸಿ ಮರವನ್ನು ತೆರವುಗೊಳಿಸಿದ್ದಾರೆ.

ಪುರಸಭಾ ವ್ಯಾಪ್ತಿಯ 12ನೇ ವಾರ್ಡಿನ 3ನೇ ಅಡ್ಡರಸ್ತೆಯಲ್ಲಿ ನೀರು ತುಂಬಿ ಪರಿಸರದ ಮನೆಗಳಸಂಪರ್ಕ ಕಡಿತಗೊಂಡಿದೆ. ಕಳೆದ 5 ದಿನಗಳಿಂದ ಇಲ್ಲಿ ಇದೇ ಪರಿಸ್ಥಿತಿ ಇದ್ದು, ಹಲವು ಮನೆಗಳಿಗೆ ಸಂಪರ್ಕ ಕಷ್ಟವಾಗಿದೆ. ರಸ್ತೆಯ ಒಂದು ಬದಿ ಖಾಸಗಿಯವರು ಲೇಔಟ್ ಮಾಡಿದ್ದು, ಆವರಣ ಗೋಡೆ ನಿರ್ಮಿಸಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಆಗದೇ ರಸ್ತೆಯಲ್ಲೇ ನಿಲ್ಲುವಂತಾಗಿದೆ. ಸುಮಾರು 20 ಮೀಟರ್ಡಡಡಡಡವ್ಯಾಪ್ತಿಯಲ್ಲಿ 2 ರಿಂದ 3 ಅಡಿಯಷ್ಟು ನೀರು ನಿಂತಿದೆ. ಕಾರ್ಕಳ ಪುರಸಭೆ ಮತ್ತು ಮಿಯ್ಯಾರು ಪಂಚಾಯಿತಿ ಗಡಿ ಪ್ರದೇಶವಾಗಿರುವ ಕಾರಣ ಸಮಸ್ಯೆಗೆ ಒಂದು ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ರಸ್ತೆಯಲ್ಲಿ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಸ್ಥಳೀಯರು ಕಾರ್ಕಳ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿಯ ಕಾರ್ಯ
ನಿರ್ವಹಣಾಧಿಕಾರಿಗೆ ಹಾಗೂ ಪುರಸಭೆಗೆ ಮನವಿ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಬೆಳ್ಮಣ್ ಗ್ರಾಮದ ಬೈಲುಮನೆ ನಿವಾಸಿ ಅಪ್ಪಿ ಮೊಯ್ಲಿ ಅವರ ಮನೆಯ ಮೇಲೆ ಬುಧವಾರ ತೆಂಗಿನ ಮರ ಬಿದ್ದು ₹20 ಸಾವಿರ ನಷ್ಟ ಉಂಟಾಗಿದೆ. ನಲ್ಲೂರು ಗ್ರಾಮದ ಕುದುರು ಮನೆಯ ಗಂಗು ಅವರ ಮನೆಯ ಹಂಚು ಮತ್ತು ಮರದ ಪಕ್ಕಾಸು ಹಾನಿಯಾಗಿದ್ದು ₹20 ಸಾವಿರ ನಷ್ಟವುಂಟಾಗಿದೆ. ಹಿರ್ಗಾನ ಗ್ರಾಮದ ಲೋಲಾಕ್ಷಿ ಎಂಬವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಅಂದಾಜು ₹15 ಸಾವಿರ ನಷ್ಟ ಸಂಭವಿದೆ. ಮಂಗಳವಾರಮುಂಡ್ಕೂರು ಪ್ರದೇಶದಲ್ಲಿಬೀಸಿದ ಗಾಳಿಗೆ ಶಿವರಾಮ ಬಂಗೇರ ಮನೆಯ ಮೇಲೆ ಮರ ಬಿದ್ದಿದೆ. ಪರಿಣಾಮ ₹35 ಸಾವಿರ ನಷ್ಟ ಸಂಭವಿಸಿದೆ. ಯರ್ಲಪಾಡಿಯ ನೇಮು ಅವರ ಮನೆಯ ಗೋಡೆ ಕುಸಿದು ₹10 ಸಾವಿರ ನಷ್ಟವುಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT