ಮಳೆಯ ಅಬ್ಬರ: ಇಂದು ಶಾಲಾ–ಕಾಲೇಜುಗಳಿಗೆ ರಜೆ

7
45 ವಿದ್ಯುತ್ ಕಂಬಗಳು ಧರೆಗೆ: ಹಲವು ಮನೆಗಳಿಗೆ ಭಾಗಶಃ ಹಾನಿ

ಮಳೆಯ ಅಬ್ಬರ: ಇಂದು ಶಾಲಾ–ಕಾಲೇಜುಗಳಿಗೆ ರಜೆ

Published:
Updated:

ಉಡುಪಿ: ಜಿಲ್ಲೆಯಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ಸೋಮವಾರವೂ ಎಡೆಬಿಡದೆ ಮಳೆ ಸುರಿಯಿತು. ಪರಿಣಾಮ ನಗರ ವ್ಯಾಪ್ತಿಯ ಅಂಬಲಪಾಡಿ, ಬನ್ನಂಜೆ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಸಂಕಷ್ಟ ಎದುರಿಸಬೇಕಾಯಿತು.

ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಾಲಾ ಹಾಗೂ ಕಾಲೇಜುಗಳಿಗೆ ಆ.14ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಆದೇಶ ಹೊರಡಿಸಿದ್ದಾರೆ. ಸೋಮವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಭಾನುವಾರ ಹಾಗೂ ಸೋಮವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಹಲವೆಡೆ 43 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಲವು ಮರಗಳು ಬಿದ್ದಿದ್ದು, ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕುಂದಾಪುರ ತಾಲ್ಲೂಕಿನ ಕಾವ್ರಾಡಿ, ಬಸ್ರೂರು ಗ್ರಾಮದಲ್ಲಿ ಎರಡು ದನದ ಕೊಟ್ಟಿಗೆ ಗೋಡೆ ಕುಸಿದಿದೆ. ಉಡುಪಿ ತಾಲ್ಲೂಕಿನ ಕಡೆಕಾರಿನಲ್ಲಿ ಮನೆಗೆ ಭಾಗಶಃ ಹಾನಿಯಾಗಿದೆ. ಕಾರ್ಕಳ ತಾಲ್ಲೂಕಿನಲ್ಲೂ ಮನೆಗೆ ಹಾನಿಯಾಗಿದೆ.

ಭಾನುವಾರ ಉಡುಪಿಯಲ್ಲಿ  80.3 ಮಿ.ಮೀ, ಕುಂದಾಪುರದಲ್ಲಿ 74.2, ಕಾರ್ಕಳದಲ್ಲಿ 96.2, ಸರಾಸರಿ 83.56 ಮಿ.ಮೀ ಮಳೆಯಾದ ವರದಿಯಾದಿದೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !