ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಸ್‌ಫರ್ಡ್‌: ರಾಜೀನಾಮೆಗೆ ಪಶ್ಚಾತಾಪವಿಲ್ಲ, ಹಿಂದೂ ಎಂಬ ಹೆಮ್ಮೆ ಇದೆ -ರಶ್ಮಿ

ಸ್ಟುಡೆಂಟ್‌ ಯೂನಿಯನ್‌ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ
Last Updated 7 ಮಾರ್ಚ್ 2021, 15:22 IST
ಅಕ್ಷರ ಗಾತ್ರ

ಉಡುಪಿ: ಇಂಗ್ಲೆಂಡ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸ್ಟುಡೆಂಟ್‌ ಯೂನಿಯನ್‌ ಅಧ್ಯಕ್ಷೆ ಸ್ಥಾನಕ್ಕೆ ಈಚೆಗೆ ರಾಜೀನಾಮೆ ನೀಡಿದ್ದ ಉಡುಪಿ ಮೂಲದ ರಶ್ಮಿ ಸಾಮಂತ್ ರಾಜೀನಾಮೆ ಹಿಂದಿನ ಕಾರಣವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

ಭಾರತ ಮೂಲದ ವಿದ್ಯಾರ್ಥಿನಿ ಇತಿಹಾಸದಲ್ಲಿ ಮೊದಲ ಬಾರಿಗೆ ಆಕ್ಸ್‌ಫರ್ಡ್‌ ವಿವಿ ಸ್ಟುಡೆಂಟ್ ಯೂನಿಯನ್‌ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದನ್ನು ಕಂಡು ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದರು. ವೈಯಕ್ತಿಕವಾಗಿ ತೇಜೋವಧೆ ಮಾಡಲಾಯಿತು. ಕೀಳುಮಟ್ಟದ ಕಮೆಂಟ್‌ಗಳನ್ನು ಹಾಕಲಾಯಿತು. ಇದರಿಂದ ಮನನೊಂದು ರಾಜೀನಾಮೆ ನೀಡಬೇಕಾಯಿತು ಎಂದು ರಶ್ಮಿ ಸಾಮಂತ್ ಹೇಳಿದರು.

ಉಡುಪಿ ಇಸ್ಲಾಮಿಫೋಬಿಯಾದ ತವರು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಟುಡೆಂಟ್ ಯೂನಿಯನ್‌ ಚುನಾವಣೆಯ ಕ್ಯಾಂಪೇನ್‌ಗೆ ಹಣ ಪಡೆಯಲಾಗಿದೆ ಎಂದೆಲ್ಲ ವಾಗ್ದಾಳಿ ನಡೆಸಲಾಯಿತು. ಪೋಷಕರ ಫೋಟೊಗಳನ್ನು ಜಾಲತಾಣಗಳಲ್ಲಿ ಹಾಕಿ ನಿಂದಿಸಲಾಯಿತು ಎಂದು ರಶ್ಮಿ ಬೇಸರ ವ್ಯಕ್ತಪಡಿಸಿದರು.

‘ನಾನು ಹಿಂದೂ ಎಂಬ ಬಗ್ಗೆ ಗರ್ವ ಹಾಗೂ ಗೌರವ ಇದೆ. ನನ್ನ ಹಿಂದೂಪರ ನಿಲುವುಗಳಿಗೆ ಬದ್ಧಳಾಗಿದ್ದೇನೆ. ಟೀಕೆಗಳಿಗೆ ಹೆದರಿ ಯಾರ ಮುಂದೆಯೂ ಕ್ಷಮೆ ಯಾಚಿಸುವುದಿಲ್ಲ. ನನ್ನ ನಿರ್ಧಾರದ ಬಗ್ಗೆ ಪಶ್ಚಾತಾಪವೂ ಇಲ್ಲ. ರಾಜೀನಾಮೆ ಕೊಟ್ಟಿದ್ದೇನೆ ಎಂದ ಮಾತ್ರಕ್ಕೆ ಸೋತಿದ್ದೇನೆ ಎಂದರ್ಥವಲ್ಲ. ನನ್ನ ಸಿದ್ಧಾಂತ, ಚಿಂತನೆ, ಹೋರಾಟಗಳು ಮುಂದುವರಿಯಲಿವೆ ಎಂದು ರಶ್ಮಿ ಸ್ಪಷ್ಟಪಡಿಸಿದರು.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಎನರ್ಜಿ ಸಿಸ್ಟಂ ವಿಷಯದಲ್ಲಿ ಎಂಎಸ್ಸಿ ಕಲಿಯುತ್ತಿದ್ದು, ಸಧ್ಯ ಇಂಗ್ಲೆಂಡ್‌ನಲ್ಲಿ ಲಾಕ್‌ಡೌನ್ ಜಾರಿ ಇರುವುದರಿಂದ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಶೀಘ್ರವೇ ಅಲ್ಲಿಗೆ ತೆರಳುತ್ತೇನೆ ಎಂದು ರಶ್ಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT