ಅದಮಾರು ಮಠದ ಜವಾಬ್ದಾರಿ ಕಿರಿಯ ಯತಿಗಳ ಹೆಗಲಿಗೆ

7
ಮಠದ ಆಡಳಿತ ಬಿಟ್ಟುಕೊಟ್ಟ ಹಿರಿಯ ಯತಿ ವಿಶ್ವಪ್ರಿಯ ಸ್ವಾಮೀಜಿ

ಅದಮಾರು ಮಠದ ಜವಾಬ್ದಾರಿ ಕಿರಿಯ ಯತಿಗಳ ಹೆಗಲಿಗೆ

Published:
Updated:
Deccan Herald

ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಅದಮಾರು ಮಠದ ಸಂಪೂರ್ಣ ಜವಾಬ್ದಾರಿಯನ್ನು ಕಿರಿಯ ಯತಿಗಳಾದ ಈಶಪ್ರಿಯ ಶ್ರೀಗಳಿಗೆ ಬಿಟ್ಟುಕೊಡಲಾಗಿದೆ ಎಂದು ಮಠದ ಹಿರಿಯ ಯತಿಗಳಾದ ವಿಶ್ವಪ್ರಿಯ ಸ್ವಾಮೀಜಿ ತಿಳಿಸಿದರು.

ಅದಮಾರು ಮಠದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮಠದ ಆಡಳಿತ, ಹಣಕಾಸು ವ್ಯವಹಾರಗಳು, ಪೂಜಾ ಕೈಂಕರ್ಯ ಸೇರಿದಂತೆ ಪ್ರಮಖ ವಿಚಾರಗಳನ್ನು ಕಿರಿಯ ಯತಿಗಳು ನೋಡಿಕೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ವಿಶ್ವಪ್ರಿಯ ಶ್ರೀಗಳು ಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ. ವೈದಿಕ ಹಾಗೂ ಲೌಕಿಕ ಅಧ್ಯಯನದಲ್ಲಿ ಪಾರಂಗತರಾಗಿದ್ದಾರೆ. ಮಠದ ವಿಚಾರಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿದ್ದಾರೆ. ಮುಂದೆ ಅವರಿಗೆ ಸೂಕ್ತ ಮಾರ್ಗದರ್ಶನಷ್ಟೆ ನೀಡಲಿದ್ದೇನೆ ಎಂದರು.

ಪರ್ಯಾಯ ವಿಚಾರದಲ್ಲಿ ಗೊಂದಲಗಳು ಬೇಡ. ಮುಂದಿನ ಪರ್ಯಾಯಕ್ಕೆ ನಾನೇ ಕೂರುತ್ತೇನೆ. ಕಿರಿಯ ಶ್ರೀಗಳು ಜತೆಯಲ್ಲಿ ಇರಲಿದ್ದಾರೆ. ಮಠದ ಶಿಕ್ಷಣ ಸಂಸ್ಥೆಗಳಿಗೆ ಅಧ್ಯಕ್ಷನಾಗಿ ಮುಂದುವರಿಯಲಿದ್ದೇನೆ. ಕಿರಿಯ ಯತಿಗಳು ಕಾರ್ಯಾಧ್ಯಕ್ಷರಾಗಿರಲಿದ್ದಾರೆ ಎಂದು ವಿಶ್ವಪ್ರಿಯ ಸ್ವಾಮೀಜಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !