ಗುರುವಾರ , ಜನವರಿ 23, 2020
26 °C

ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿ: 'ರೋಹ್ಟಕ್‌ ಎಂಡಿ' ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿವಿ  ಪುರುಷರ ಕಬಡ್ಡಿ ಟೂರ್ನಿಯಲ್ಲಿ ರೋಹ್ಟಕ್‌ನ ಎಂ.ಡಿ ವಿಶ್ವವಿದ್ಯಾಲಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ಅಮೃತ್‌ಸರದ ಜಿಎನ್‌ಡಿ ವಿವಿ ವಿರುದ್ಧ 47–28 ಪಾಯಿಂಟ್ಸ್‌ಗಳ ಅಂತರದಲ್ಲಿ ಎಂ.ಡಿ ವಿವಿ ಜಯ ಸಾಧಿಸಿತು.

ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಮಂಗಳೂರು ವಿವಿ ಸೆಮಿಫೈನಲ್‌ನಲ್ಲಿ ಎಡವಿತು. ಕುರುಕ್ಷೇತ್ರ ವಿವಿ ವಿರುದ್ಧ 39–27 ಪಾಯಿಂಟ್ಸ್‌ಗಳಿಂದ ಮಂಗಳೂರು ವಿವಿ ಸೋಲು ಅನುಭವಿಸಿತು.

ವೈಯಕ್ತಿಕ ವಿಭಾಗದಲ್ಲಿ ಅಮೃತಸರದ ಜಿಎನ್‌ಡಿ ವಿವಿ ಆಟಗಾರ ರಿಂಕು ಅತ್ಯುತ್ತಮ ಕ್ಯಾಚರ್, ಮಂಗಳೂರು ವಿವಿಯ ಮಿಥುನ್ ಅತ್ಯುತ್ತಮ ರೈಡರ್‌,  ಕುರುಕ್ಷೇತ್ರ ವಿವಿಯ ಅಂಕಿತ್ ಅತ್ಯುತ್ತಮ ಆಲ್‌ ರೌಂಡರ್, ಎಂಡಿ ವಿವಿಯ ವಿನಯ್‌ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು.

ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ, ಪೂರ್ಣ ಪ್ರಜ್ಞ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಡಿ.18ರಿಂದ 27ರವರೆಗೆ ಟೂರ್ನಿ ನಡೆದಿತ್ತು.

ಪ್ರತಿಕ್ರಿಯಿಸಿ (+)