ಭಾನುವಾರ, ಜೂನ್ 26, 2022
25 °C

ಪ್ರಯಾಣಿಕನ ಜೀವ ರಕ್ಷಿಸಿದ ಆರ್‌ಪಿಎಫ್‌ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರೈಲಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಅಪಾಯಕ್ಕೆ ಸಿಲುಕಿದ್ದ ಪ್ರಯಾಣಿಕನನ್ನು ಆರ್‌ಪಿಎಫ್‌ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕುತಿ ಕುಂದನ್‌ (70) ಪ್ರಾಣಾಪಾಯದಿಂದ ಪಾರಾದವರು. ರೈಲ್ವೆ ಸಿಬ್ಬಂದಿ ಸಜೀರ್‌ ರಕ್ಷಣೆ ಮಾಡಿದವರು.

ಬುಧವಾರ ಮಧ್ಯಾಹ್ನ 12620 ಸಂಖ್ಯೆಯ ರೈಲು ಉಡುಪಿ ನಿಲ್ದಾಣದಿಂದ ಹೊರಡುವಾಗ ರೈಲಿನಲ್ಲಿದ್ದ ಕುತಿ ಕುಂದನ್ ಕೆಳಗಿಳಿಯುವಾಗ ಆಯತಪ್ಪಿದ್ದಾರೆ. ರೈಲಿನಿಂದ ಕೆಳಗೂ ಇಳಿಯಲು ಸಾದ್ಯವಾಗದೆ, ಹತ್ತಲೂ ಸಾದ್ಯವಾಗದೆ ರೈಲಿನ ಹಿಡಿಕೆಯನ್ನು ಹಿಡಿದುಕೊಂಡಿದ್ದಾರೆ. ಪರಿಣಾಮ ಸ್ವಲ್ಪ ದೂರ ರೈಲು ಅವರನ್ನು ಎಳೆದೊಯ್ದಿದೆ.

ಇದನ್ನು ಗಮನಿಸಿದ ಆರ್‌ಪಿಎಫ್‌ ಸಿಬ್ಬಂದಿ ಸಾಜಿರ್ ತಕ್ಷಣ ನೆರವಿಗೆ ದಾವಿಸಿ ಕುತಿ ಕುಂದನ್ ಅವರನ್ನು ಕೆಳಗೆ ಎಳೆದು ರಕ್ಷಣೆ ಮಾಡಿದ್ದಾರೆ. ಬಳಿಕ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

ಕುತಿ ಕುಂದನ್‌ ಪೆರ್ಡೂರಿನವರಾಗಿದ್ದು ಮಗಳನ್ನು ರೈಲಿಗೆ ಹತ್ತಿಸಲು ನಿಲ್ದಾಣಕ್ಕೆ ಬಂದಿದ್ದರು. ಸಮಯಕ್ಕೆ ಸರಿಯಾಗಿ ರಕ್ಷಣೆಗೆ ದಾವಿಸಿದ ಸಾಜಿರ್ ಅವರನ್ನು ಕುತಿ ಕುಂದನ್ ಕುಟಂಬದ ಸದಸ್ಯರು ಹಾಗೂ ರೈಲ್ವೆ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು