ಬುಧವಾರ, ಆಗಸ್ಟ್ 4, 2021
20 °C

ಕಾರ್ಕಡ: ಭತ್ತ ನಾಟಿಕಾರ್ಯ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಲಿಗ್ರಾಮ (ಬ್ರಹ್ಮಾವರ): ಮುಂಗಾರು ಮಳೆ ಪ್ರಾರಂಭದ ಸಂಕೇತ ನೀಡುತ್ತಿದ್ದಂತೆ ಕೋಟ ಹೋಬಳಿ ಪ್ರದೇಶವಾದ ಸಾಲಿಗ್ರಾಮದ ಕಾರ್ಕಡ ಭಾಗದಲ್ಲಿ ಭತ್ತದ ನಾಟಿ ಕಾರ್ಯ ಬಿರುಸಿನಿಂದ ಸಾಗುತ್ತಿದೆ.

ಮೇ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ನಡೆಸಿದವರಿಗೆ ಜೂನ್ ತಿಂಗಳ ಮುಂಗಾರು ಮಳೆ ವರವಾಗಿ ಪರಿಣಮಿಸಿದೆ. ಬಿತ್ತನೆ ನಡೆಸಿ 20ರಿಂದ 25ದಿನಗಳ ನಂತರ ನಾಟಿಗೆ ಸಿದ್ಧಗೊಳ್ಳುತ್ತದೆ. ಅದರಂತೆ ಕೆಲವೊಂದು ಭಾಗದಲ್ಲಿ ಬೇಗ ಬಿತ್ತನೆ ನಡೆಸಿದವರಿಗೆ ಅನುಕೂಲವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಚಂಡಮಾರುತದ ಪರಿಣಾಮ ಮಳೆ ಬೇಗನೆ ಆರಂಭವಾಗಿ ಕೃಷಿ ಕಾಯಕಕ್ಕೆ ಅನುಕೂಲ ಮಾಡಿಕೊಟ್ಟಿದೆ.

ಕೂಲಿಯಾಳುಗಳಿಂದ ನಾಟಿ: ಇತ್ತೀಚಿಗಿನ ವರ್ಷಗಳಲ್ಲಿ ಕೂಲಿಯಾಳುಗಳ ಸಮಸ್ಯೆಯಿಂದ ರೈತ ಸಮುದಾಯ ನಾಟಿ ಕಾರ್ಯಕ್ಕೆ ಯಂತ್ರಗಳ ಮೂಲಕ ಮೊರೆ ಹೋಗುತ್ತಿದ್ದರು. ಆದರೆ, ಈ ಬಾರಿ ಲಾಕ್‌ಡೌನ್‌ನಿಂದಾಗಿ ನಾಟಿ ಯಂತ್ರಗಳು ಇನ್ನೂ ಬಂದಿಲ್ಲ. ಹೀಗಾಗಿ ಬಲು ಅಪರೂಪವೆಂಬಂತೆ ಸ್ಥಳೀಯ ಕೂಲಿಯಾಳುಗಳ ನೆರವಿನೊಂದಿಗೆ ಸಾಲಿಗ್ರಾಮ, ಕೋಟ ಪರಿಸರದಲ್ಲಿ ಕೃಷಿ ಕಾರ್ಯ ನಡೆಸಲಾಗುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.